• Slide
    Slide
    Slide
    previous arrow
    next arrow
  • ಶಿರಸಿ ಯುವಮೋರ್ಚಾದಿಂದ ಬೈಕ್ ಜಾಥಾ;ಹೆಲ್ಮೆಟ್ ಧರಿಸದ್ದಕ್ಕೆ ಸಾರ್ವಜನಿಕರಿಂದ ಟೀಕೆ

    300x250 AD

    ಶಿರಸಿ: ನಗರದ ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರಕಾರ 8 ವರ್ಷಗಳ ಯಶಸ್ವಿ ಆಡಳಿತದ ಅಂಗವಾಗಿ ಸೇವೆ, ಸುಶಾಸನ, ಬಡವರ ಕಲ್ಯಾಣ ಯೋಜನೆಯ ಅಂಗವಾಗಿ ಬೈಕ್ ಜಾಥವನ್ನು ಏರ್ಪಡಿಸಲಾಯಿತು.

    ಕೇಂದ್ರ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಯುವ ಮೋರ್ಚ ಜಿಲ್ಲಾಧ್ಯಕ್ಷ ಪ್ರಶಾಂತ ನಾಯ್ಕ ಮತ್ತು ನಗರ ಯುವಮೋರ್ಚ ಅಧ್ಯಕ್ಷ ನಾಗರಾಜ ನಾಯ್ಕ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಹಾಗೂ ನಗರ ಮಂಡಳದ ಎಲ್ಲ ಸ್ಥರದ ಪದಾಧಿಕಾರಿಗಳು, ಯುವಮೋರ್ಚ ಸದಸ್ಯರು ಭಾಗವಹಿಸಿದ್ದರು.

    300x250 AD

    ಸರಕಾರದ ನಿಯಮ ಪಾಲಿಸಬೇಕಿದ್ದವರಿಂದಲೇ ನಿಯಮ ಉಲ್ಲಂಘನೆ: ಜಾಥಾದಲ್ಲಿ ಭಾಗವಹಿಸಿದ್ದ ಬಹುತೇಕರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ ಬಿಜೆಪಿ ಯುವಮೋರ್ಚಾ ಸದಸ್ಯರ ನಡೆಗೆ ಸಾರ್ವಜನಿಕರಿಂದ ಆಕ್ಷೇಪಗಳು ಕೇಳಿಬಂದವು.

    Share This
    300x250 AD
    300x250 AD
    300x250 AD
    Leaderboard Ad
    Back to top