ಶಿರಸಿ:ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಶಿರಸಿಯ ಶ್ರೀ ಟ್ರಸ್ಟ್ ಸಹಯೋಗದಲ್ಲಿ “ಬನ್ನಿ ಪುನಃ ಶಾಲೆಗೆ ಹೋಗೋಣ” ಎಂಬ ಧ್ಯೇಯ ವಾಕ್ಯದ ಕಾರ್ಯಕ್ರಮವು ಜೂನ್ ೧೦,ಶುಕ್ರವಾರದಂದು ನಡೆಯಿತು
ಶ್ರೀ ಟ್ರಸ್ಟ್ ನ ವತಿಯಿಂದ ಅಮೋದ ಸಿರ್ಸಿಕರ್ ಪ್ರೌಢಶಾಲೆಯ ಎಂಟು,ಒಂಬತ್ತು ಮತ್ತು ಹತ್ತನೇ ವರ್ಗದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತಶಾಲಾ ಬ್ಯಾಗ್ ವಿತರಣೆ ಮಾಡಿದರು.ನಂತರ ಮಾತನಾಡಿದ ಸಿರ್ಸಿಕರ್ ಅವರು ಜೀವನದಲ್ಲಿ ದಾನದ ಗುಣವನ್ನು ಬೆಳೆಸಿಕೊಳ್ಳಬೇಕು, ಹಾಗೆಯೆ ಜೀವನದಲ್ಲಿ ಒಳ್ಳೆಯ ಚಾರಿತ್ರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಶಾಲೆಯ ಮುಖ್ಯಾಧ್ಯಾಪಕರಾದ ಎಂ ಜಿ ಹೆಗಡೆ ಸ್ವಾಗತಿಸಿದರು. ಆರ್ ಕೆ ಚವ್ಹಾಣ್ ವಂದಿಸಿದರು. ನಾರಾಯಣ ದಾಯಿಮನೆ ಕಾರ್ಯಕ್ರಮ ನಿರ್ವಹಿಸಿದರು.