
ಶಿರಸಿ: ರೈತರ ಪಾಲಿಗೆ ಜೀವನಾಡಿಯಾಗಿ ಕೆಲಸಮಾಡಿ ಬೃಹತ್ ಟಿಎಸ್‍ಎಸ್ ಸಂಸ್ಥೆಯನ್ನು ಕಟ್ಟಿದ ಹಿರಿಯ ಸಹಕಾರಿ ಧುರೀಣ ದಿ.ಶ್ರೀಪಾದ ಆರ್ ಹೆಗಡೆ ಕಡವೆ ಅವರ 26 ನೇ ವಾರ್ಷಿಕ ಪುಣ್ಯ ಸ್ಮರಣೆಯನ್ನು ಸಾಮ್ರಾಟ ಸಭಾಭವನದಲ್ಲಿ ಅವರ ಅನುಯಾಯಿಗಳು ಸೇರಿದಂತೆ ಟಿ ಎಸ್ ಎಸ್, ಎಸ್ ಆರ್ ಕಡವೆ ಅಭ್ಯುದಯ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಿಂದ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಸಹಕಾರಿ ರತ್ನ ಹಾಗು ಟಿ ಎಸ್ ಎಸ್ ಅಧ್ಯಕ್ಷ ಶಾಂತರಾಮ ಹೆಗಡೆ ಮತ್ತು ಸರಸ್ವತಿ ದಂಪತಿಗಳು ಕಡವೆ ಹೆಗಡೆಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಇದೇ ರೀತಿಯಾಗಿ ಆಗಮಿಸಿದ ಗಣ್ಯರು ಕಡವೆ ಹೆಗಡೆಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ, ಟಿಎಸ್‍ಎಸ್ ವ್ಯವಸ್ಥಾಪಕ ರವೀಶ ಹೆಗಡೆ, ಮುಖರಾದ ರಾಮಕೃಷ್ಣ ಹೆಗಡೆ ಕಡವೆ, ಶಶಾಂಕ ಶಾಂತರಾಮ ಹೆಗಡೆ, ಎಸ್ ಕೆ ಭಾಗವತ, ಜಗದೀಶ ಗೌಡ್ರು, ಸಿ ಎಫ್ ನಾಯ್ಕ, ದೀಪಕ ದೊಡ್ಡೂರ್, ಬಸವರಾಜ ದೊಡ್ಮನೆ, ಜಿ.ವಿ ಹೆಗಡೆ ಬಿಸಲಕೊಪ್ಪ, ಜಿ ಆರ್ ಹೆಗಡೆ ಸೊಂದಾ, ಎಂ ಪಿ ಹೆಗಡೆ ಬೊಪ್ಪನಳ್ಳಿ, ಶ್ರೀಪಾದ ಹೆಗಡೆ, ಎಂ ಕೆ ಹೆಗಡೆ ಗೋಳಿಕೊಪ್ಪ, ನಾಗರಾಜ ಹೆಗಡೆ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಆಗಮಿಸಿದ ಗಣ್ಯರು ಕಡವೆ ಹೆಗಡೆಯವರ ಪುಣ್ಯಸ್ಮರಣೆ ನಿಮಿತ್ತ ಪಂಚಲಿಂಗಕ್ಕೆ ತೆರಳಿ ಕಡವೆ ಹೆಗಡೆಯವರ ಒಡನಾಡಿಗಳಲ್ಲೊಬ್ಬರಾದ ಶ್ರೀಪಾದ ಭಟ್ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.