ಸಿದ್ದಾಪುರ: ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಲದ ರಾಜ್ಯ ಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯು ಇತ್ತೀಚೆಗೆ ಪಟ್ಟಣದ ಬಾಲಭವನದಲ್ಲಿ ನಡೆಯಿತು.
ಚಂದ್ರಗುತ್ತಿಯ ಯೋಗೇಶ್ವರ ಮಠದ ಯೋಗಿ ಸುಖದೇವನಾಥ್ ಜಿ ಮತ್ತು ರಮತೆಯೋಗಿ ನಿವೃತ್ತನಾಥ್ ಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು. ಜೋಗಿ ಸಮಾಜದ ತಾಲೂಕಾಧ್ಯಕ್ಷ ಅಶೋಕ ಜೋಗಿ ಮಾತನಾಡಿ, ಜೋಗಿ ಸಮಾಜವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಾಗಿತೀರ ಹಿಂದುಳಿದಿದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಯಾದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಮಹಾಮಂಡಳದ ಅಧ್ಯಕ್ಷ ಶಿವಾಜಿ ಡಿ.ಮಧುರಕರ್ ಮಾತನಾಡಿ, ನಾವು ಸಂಘಟಿತರಾಗಿ ಹೋರಾಟ ಮಾಡಿದಾಗ ನಮ್ಮ ಜನಾಂಗದ ದನನೀಯ ಸ್ಥಿತಿಯನ್ನು ಮನವರಿಕೆ ಮಾಡಬಹುದು. ಹುಬ್ಬಳ್ಳಿಯಲ್ಲಿ ನವೆಂಬರ್ನಲ್ಲಿ ನಡೆಯುವ ಸಮಾಜದ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಮಿಥುನ್ ಮತ್ತು ಭುವನ್ ಜೋಗಿ ಪ್ರಾರ್ಥಿಸಿದರು. ನಾಗರಾಜ ಜೋಗಿ, ಸ್ವಾಗತಿಸಿ ನಿರೂಪಿಸಿದರು. ಮಹಾಮಂಡಳದ ಡಾ.ಆನಂದಪ್ಪ ಜೋಗಿ, ಚಂದ್ರಪ್ಪ ಪ್ರಬಳಕರ್, ರಾಜು ಮುದಳಕರ್, ರಾಮು ಮದುಳಕರ್, ಶಿವಕುಮಾರ ಜೋಗಿ, ಅಣ್ಣಪ್ಪ ಜೋಗಿ, ವಿಜಯಲಕ್ಷ್ಮಿ ಮುಂತಾದವರು ವೇದಿಕೆಯಲ್ಲಿದ್ದರು.