ಶಿರಸಿ: ನಾಲ್ಕು ವರ್ಷದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಇಲ್ಲಿಯ ಯಕ್ಷಗೆಜ್ಜೆ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರವು ಜುಲೈ 3ರಿಂದ ಒಂದಷ್ಟು ಹೊಸ ಹೆಜ್ಜೆಗಳನ್ನಿಡಲು ನಿರ್ಧರಿಸಿದೆ.
ಶನಿವಾರ ಮತ್ತು ರವಿವಾರ ಎರಡು ದಿನ ಎರಡು ಬ್ಯಾಚ್ನಲ್ಲಿ ಕಲಿಕೆ, ಮೂರು ತಿಂಗಳಿಗೊಮ್ಮೆ ಇಡೀ ದಿನ ಹಿಮ್ಮೇಳ, ಸಂಪನ್ಮೂಲ ವ್ಯಕ್ತಿಗಳನ್ನಿಟ್ಟು ತರಬೇತಿ, ಮಹಿಳೆಯರಿಗೆ ತಾಳಮದ್ದಳೆ ತರಬೇತಿ, ತಿಂಗಳಿಗೊಂದು ಪ್ರದರ್ಶನ, ಮಕ್ಕಳಿಗೆ ಪೌರಾಣಿಕ ಕಥಾ ಪರಿಚಯ ಮತ್ತು ಅರ್ಥಗಾರಿಕೆ ತರಬೇತಿ, ಯಕ್ಷಗಾನ ಭಾಗವತಿಕೆ, ಮದ್ದಲೆ, ಚೆಂಡೆ ತರಬೇತಿ ನಡೆಯಲಿದೆ.
ಆಸಕ್ತರು ನಿರ್ಮಲಾ ಹೆಗಡೆ (ಮೊ.ಸಂ: 94836 47757/ 9353958611), ಲತಾ ಗಿರಿಧರ (ಮೊ.ಸಂ: 94489 95584), ಜ್ಯೋತಿ ಶೇಖರ್ (ಮೊ.ಸಂ: 72594 78480), ವಿಘ್ನೇಶ್ವರ (94482 36678), ಎಂ.ಕೆ.ಗೋಳಿಕೊಪ್ಪ (ಮೊ.ಸಂ: 94484 46066) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.