ಭಟ್ಕಳ: ಇಲ್ಲಿನ ಮುರ್ಡೇಶ್ವರ ಬೀಚ್ ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಓರ್ವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಡಿಗೋಲ ನಿವಾಸಿ ಶೇಖ್ ಅಬ್ರಾರ್ ಪಾಶ(21) ಎಂಬಾತ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದ.
ಅಂತೆಯೇ ಇನ್ನೋರ್ವ ಶಿವಮೊಗ್ಗದ ತೀರ್ಥಹಳ್ಳಿಯ ಆಗುಂಬೆ ನಿವಾಸಿ ಸುಶಾಂತ್ ಎಂ.ಎಸ್(21) ಕುಟುಂಬ ಸದಸ್ಯರೊಂದಿಗೆ ಬಂದಿದ್ದ. ಪ್ರವಾಸಕ್ಕೆಂದು ಬಂದಿದ್ದ ಈ ಯುವಕರು ಈಜಾಡುವ ಸಲುವಾಗಿ ನೀರಿಗೆ ಇಳಿದಾಗ ಆಯತಪ್ಪಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು ಕಾಣೆಯಾಗಿರುವ ಯುವಕರ ಮೃತ ದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ.
ಮುರ್ಡೇಶ್ವರ ಬೀಚ್ ನಲ್ಲಿ ನೀರು ಪಾಲಾದ ಇಬ್ಬರು ಯುವಕರು
