• Slide
    Slide
    Slide
    previous arrow
    next arrow
  • ಹಳ್ಳಿ ಪ್ರತಿಭೆ ನಿಖಿತಾಗೆ ಆಯುರ್ವೇದಿಕ್ ಪಂಚಕರ್ಮದ ಬೆಸ್ಟ್ ರಿಸರ್ಚ್ ಅವಾರ್ಡ್

    300x250 AD

    ಶಿರಸಿ: ಆಯುರ್ವೇದಿಕ್ ಪಂಚಕರ್ಮದಲ್ಲಿ ISSN word research council international ಸಂಸ್ಥೆಯಿಂದ‌ ಕೊಡುವ best international research award ಗೆ ಶಿರಸಿ ತಾಲೂಕಿನ ಬಿಸಲಕೊಪ್ಪದ ಹಳ್ಳಿ ಪ್ರತಿಭೆ ನಿಖಿತಾ ಕಲಬುರ್ಗಿ ಭಾಜನಳಾಗಿದ್ದಾಳೆ.

    ತಮಿಳುನಾಡಿನ ತಿರುಚಿರಪಲ್ಲಿ ಪ್ರತಿಷ್ಠಿತ ಬ್ರಿಜಾ ಹೊಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.. ನಿಖಿತಾ ಕಲಬುರ್ಗಿ ಇವರು ಹುಬ್ಬಳ್ಳಿಯ ರಾಜೀವ್ ಗಾಂಧಿ ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಎಂ.ಡಿ. ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ಶಿರಸಿ ತಾಲೂಕು ಎಸ್. ಎಸ್.ಕೆ.ಸಮಾಜದ‌ ಅಧ್ಯಕ್ಷರಾದ ಗುರುನಾಥ ಕಲಬುರ್ಗಿ ಹಾಗೂ ಅವರ ಪತ್ನಿ ನಾಗರತ್ನ ಗುರುನಾಥ ಕಲಬುರ್ಗಿ ಇವರ ಕಿರಿಯ ಪುತ್ರಿಯಾಗಿದ್ದಾರೆ.

    300x250 AD

    ಇವರ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಪಾಲಕ ಪೋಷಕರು ಮತ್ತು ಬಂಧು ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top