
ಶಿರಸಿ: ಗುಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಮತ್ತಿಘಟ್ಟ ರಸ್ತೆ ಮೇಲೆ ಸುಮಾರು ಹದಿನೈದಕ್ಕೂ ಅಧಿಕ ಮರ ಬಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಶನಿವಾರ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ, ಗ್ರೀನ್ ರಿವೈನ್ ರೆಸಾರ್ಟ್ ನ ಪ್ರಮೋದ ವೈದ್ಯ ಸೇರಿದಂತೆ ಊರ ಜನರೆಲ್ಲರೂ ಜೊತೆಗೂಡಿ ರಸ್ತೆ ಮೇಲೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.
ಮತ್ತಿಘಟ್ಟ ಊರ ಜನರು ಮತ್ತು ಹಳವಳ್ಳಿಯ ಒಂದಿಬ್ಬರು ಸೇರಿ ಮತ್ತಿಘಟ್ಟದಿಂದ ಕಮ್ಮಾಣಿ, ಹಳವಳ್ಳಿ, ಕಲ್ಲೇಶ್ವರ, ಹೆಗ್ಗಾರ್ ಮುಂತಾದ ನೆರೆ ಪೀಡಿತ ಪ್ರದೇಶಗಳಿಗೆ ತಲುಪುವ ರಸ್ತೆ ತೆರವು ಕಾರ್ಯವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಆದರೆ ಈ ರಸ್ತೆ ತುಂಬಾ ದುರ್ಗಮವಾಗಿದ್ದು, 4×4 ವಾಹವನದ ಸಂಚಾರಕ್ಕೆ ಮಾತ್ರ ಯೋಗ್ಯವಾಗಿದೆ. ಯಾರೂ ಕೂಡ ಬೈಕ್ ಅಥವಾ ಬೇರೆ ವಾಹನದಲ್ಲಿ ಪ್ರಯಾಣ ಮಾಡುವಂತಿಲ್ಲ ಎಂಬ ಮಾಹಿತಿ ದೊರಕಿದೆ.