• first
    second
    third
    previous arrow
    next arrow
  • ಸಾಹಿತ್ಯ ಪ್ರೇಮಿ ಮಹಾದೇವ ಮಾಸ್ತರ್ ಗೆ ಸನ್ಮಾನ ಕಾರ್ಯಕ್ರಮ

    300x250 AD

    ಅಂಕೋಲಾ: ನಾಡು-ನುಡಿಗೆ ಅಪೂರ್ವ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ಮಿತ್ರ ಸಂಗಮ ಹಾಗೂ ಲಾಯನ್ಸ್ ಕ್ಲಬ್ ಕರಾವಳಿಯ ಸಹಯೋಗದಲ್ಲಿ ನಿವೃತ್ತ ಶಿಕ್ಷಕ, ಸಾಹಿತ್ಯ ಪ್ರೇಮಿ ಮಹಾದೇವ ಮಾಸ್ತರ ಎಂದೇ ಹೆಸರಾದ ಸೂರ್ವೆಯ ಮಹಾದೇವ ನಾಯಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಬಾಸಗೋಡದ ಸಿಂಡಿಕೇಟ್ ಬ್ಯಾಂಕಿನ ಎದುರಿನಲ್ಲಿರುವ ಅವರ ಮಗಳಾದ ಸಾವಿತ್ರಿ ನಾಯಕರ ಮನೆಯಂಗಳದಲ್ಲಿ ಜೂ.11ರ ಸಂಜೆ 4.30 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಸಾಹಿತಿ ಮೋಹನ ಹಬ್ಬು ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ, ನಿವೃತ್ತ ಪ್ರಾಚಾರ್ಯ ರಾಮಕೃಷ್ಣ ಗುಂದಿ ಅಭಿನಂದನಾಪರ ಮಾತುಗಳನ್ನಾಡಲಿದ್ದಾರೆ.

    300x250 AD

    ಲಾಯನ್ಸ್ ಅಧ್ಯಕ್ಷ ಡಾ.ಕರುಣಾಕರ ನಾಯ್ಕ, ಸಂಜಯ ಅರುಂದೇಕರ, ಎಸ್.ಆರ್.ಉಡುಪಿ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ನಿವೃತ್ತ ಪ್ರಾಚಾರ್ಯ ವೆರ್ಣೇಕರ, ಸಾಹಿತಿ ಜೆ.ಪ್ರೇಮಾನಂದ ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ಮಹಾದೇವ ಮಾಸ್ತರ ಅಭಿಮಾನಿಗಳು ಉಪಸ್ಥಿತರಿರಲು ಕಾರ್ಯಕ್ರಮದ ಸಂಘಟಕರ ಪರವಾಗಿ ಮಹಾಂತೇಶ ರೇವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top