ಶಿರಸಿ : ತಾಲೂಕಿನ ಕೋಡಿಗಾರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಣ್ಯ ಸಸಿಗಳ ಬೀಜ ಬಿತ್ತೋತ್ಸವ ಮತ್ತು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಹುಲೇಕಲ್ ವಲಯದ ಉಪ ಅರಣ್ಯಾಧಿಕಾರಿ ರವಿ ಎಸ್, ಶಾಲಾ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು. ಶಾಲಾ ಮುಖ್ಯಾಧ್ಯಾಪಕಿ ಪೂರ್ಣಿಮಾ ಹೆಗಡೆ , ಸಹ ಶಿಕ್ಷಕಿ ಅನಿಲಾ ಶೇಟ್ ,ಅರಣ್ಯ ರಕ್ಷಕ ರಮಾಕಾಂತ್, ಗ್ರಾಮ ಪಂಚಾಯತ್ ಹುಲೇಕಲ್ ಸದಸ್ಯ ಖಾಸೀಮ್ ಸಾಬ್, ಎಸ್. ಡಿ.ಎಂ. ಸಿ. ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತರು,ಬಿಸಿಯೂಟ ಅಡುಗೆ ಸಿಬ್ಬಂದಿ,ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.