ಶಿರಸಿ: ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ರಾಜ್ಯದಲ್ಲೇ ಕೀರ್ತಿ ಗಳಿಸಿದ ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಗೆ 2021-22ನೆ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ಸ್ ಆಗಿದ್ದಾರೆ. ಮರು ಮೌಲ್ಯಮಾಪನಕ್ಕೆ ಹಾಕಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಗಳಿಸಿದ್ದಾರೆ. ದೀಕ್ಷಾ ರಾಜು ನಾಯ್ಕ ಮತ್ತು ಲತಾ ಸವಣೂರು 625 ಕ್ಕೆ 625 ಅಂಕ ಗಳಿಸಿದ್ದಾರೆ. ಈ ಮೊದಲು ಚಿರಾಗ್ ಮಹೇಶ್ ನಾಯ್ಕ ಟಾಪರ್ ಆಗಿ ಹೊರಹೊಮ್ಮಿದ್ದು,ಅನನ್ಯಾ ರಾಜೇಶ್ ನಾಯಕ್ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದರು.ಅಮಿತ್ ಮಹೇಶ್ ಹೆಗಡೆ ಮತ್ತು ನಿಧಿಶ್ರೀ ಸಿ. ಕೆ. 623 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.
ಒಟ್ಟಾರೆಯಾಗಿ ಅತ್ಯುತ್ತಮ ಗುಣಾತ್ಮಕ A ಗ್ರೇಡ್ ಫಲಿತಾಂಶ ಪಡೆದ ಶಿರಸಿಯ ಶ್ರೀ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಬಾರಿ 18ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ಮೊದಲ ಹತ್ತು ಸ್ಥಾನ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಉಪ ಪ್ರಾಂಶುಪಾಲರಾದ ನಾಗರಾಜ ಸಿ ನಾಯ್ಕ ಅಭಿನಂದಿಸಿದ್ದಾರೆ. ಜೊತೆಗೆ ಎಲ್ಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯು ಹರ್ಷ ವ್ಯಕ್ತಪಡಿಸಿದ್ದಾರೆ.
ಮರು ಮೌಲ್ಯಮಾಪನ: ಮಾರಿಕಾಂಬಾ ಪ್ರೌಢಶಾಲೆಗೆ ಮೂವರು ಟಾಪರ್ಸ್
