ಶಿರಸಿ: ಇಲ್ಲಿನ ಎಂ. ಇ.ಎಸ್ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಅಡಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು “ಸದೃಢ ದೇಶಕ್ಕೆ ಸದೃಢ ಯುವಜನತೆ” ಎಂಬ ಧ್ಯೇಯೋದ್ದೇಶದೊಂದಿಗೆ ಸಿದ್ಧಿ ವಿನಾಯಕ ದೇವಸ್ಥಾನ ಗೋಳಿಯಲ್ಲಿ ಪ್ರಾರಂಭಗೊಂಡಿತು.
ಸಂಸ್ಥೆಯ ಅಧ್ಯಕ್ಷರಾದ ಜಿ.ಎಂ. ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ,ಯುವ ಪೀಳಿಗೆಯ ಅಭಿವೃದ್ಧಿಯ ಕುರಿತು ಮಾತನಾಡಿದರು. ದೇವಸ್ಥಾನದ ಅಧ್ಯಕ್ಷರಾದ ಕೆ. ಆರ್. ಹೆಗಡೆ ಅಮ್ಮಚ್ಚಿ ಗಿಡಕ್ಕೆ ನೀರೆರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿಂದೆ ತುರ್ತು ಪರಿಸ್ಥಿತಿ ಇದ್ದಾಗಿನ ಸ್ಥಿತಿ ಈಗಲೂ ಭಾರತದಲ್ಲಿ ಇದೆ, ಯುವಜನತೆ ಇದನ್ನು ಅರಿತು ಕಾರ್ಯಕ್ರಮವನ್ನು ಕೈಗೊಳ್ಳಬೇಕು ಎನ್ನುವ ಸಂದೇಶವನ್ನು ನೀಡಿದರು.ಅತಿಥಿಗಳಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಟಿ.ಎಸ್. ಹಳೇಮನೆ ಇವರು ‘ಸ್ವಚ್ ಭಾರತ್’ ಯೋಜನೆ ಕುರಿತಾದ ಮಾಹಿತಿ ನೀಡಿದರು. ಮತ್ತೋರ್ವ ಅತಿಥಿಯಾಗಿ ವಿದ್ಯಾಲಯದ ಪ್ರಾಧ್ಯಾಪಕರಾದ ಹಾಗೂ ನೋಡಲ್ ಅಧಿಕಾರಿಯಾದ ಪ್ರೊ.ಜಿ. ಟಿ. ಭಟ್ ಎನ್.ಎಸ್. ಎಸ್ ಶಿಬಿರದ ದೈನಂದಿನ ಕಾರ್ಯಕ್ರಮ ಹಾಗೂ ಉದ್ದೇಶದ ಕುರಿತಾದ ಮಾಹಿತಿ ನೀಡಿದರು.
ಶಿಬಿರದ ನೂತನ ಅಧಿಕಾರಿಯಾಗಿ ಆಯ್ಕೆಗೊಂಡ ಪ್ರೊ.ಆರ್.ಆರ್.ಹೆಗಡೆ ಅವರು ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ,ವಂದಿಸಿದರು. ಶಿಬಿರದ ಮಾರ್ಗದರ್ಶಕರಾದ ಪ್ರೊ.ಕೆ.ಎನ್.ರೆಡ್ಡಿಯವರು,ಪ್ರಾಧ್ಯಾಪಕಿಯರಾದ ದಿವ್ಯಾ ಹೆಗಡೆ, ಹರ್ಷಿಣಿ ಪಾವಸ್ಕರ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಸದೃಢ ದೇಶಕ್ಕೆ ಸದೃಢ ಯುವಜನತೆ’ ಧ್ಯೇಯೋದ್ದೇಶದೊಂದಿಗೆ ವಾರ್ಷಿಕ ಶಿಬಿರ ಪ್ರಾರಂಭ
