
ಯಲ್ಲಾಪುರ: ವರುಣಾರ್ಭಟಕ್ಕೆ ಉಕ್ಕಿ ಹರಿದ ಗಂಗಾವಳಿ ನದಿಯ ರಭಸಕ್ಕೆ ಸಿಕ್ಕು ಕೊಚ್ಚಿ ಹೋದ ಗುಳ್ಳಾಪುರ ಸೇತುವೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಗ್ಗಾರ್ – ಕಲ್ಲೇಶ್ವರ ಮುಖ್ಯ ಸಂಪರ್ಕ ಕೊಂಡಿಯಾದ ಗುಳ್ಳಾಪುರ ಸೇತುವೆ ಕುಸಿದಿದ್ದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ವಿನಂತಿಸಿದರು.
ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಹೆಬ್ಬಾರ್ ಶೀಘ್ರವಾಗಿ ‘ಯಾಂತ್ರೀಕೃತ ಬೋಟ್’ ಅನ್ನು ಕಲ್ಪಿಸಿದ್ದಾರೆ.
15 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಬೋಟ್ ಹೊಂದಿದ್ದು ಎಲ್ಲಾ ಆಧುನಿಕ ರಕ್ಷಣಾ ಪರಿಕರಗಳನ್ನು ಹೊಂದಿದೆ. ಸಚಿವರ ಈ ಶೀಘ್ರ ಸ್ಪಂದನೆಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.