• first
  second
  third
  previous arrow
  next arrow
 • ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

  300x250 AD

  ಶಿರಸಿ : ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ನಲ್ಲಿ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

  ಶಾಲೆಯ ಹಳೆಯ ವಿದ್ಯಾರ್ಥಿಗಳೂ ಆದ ಗುರುಪಾದ ಹೆಗಡೆ ಕಮಟಿ (ಬನವಾಸಿ) ಮತ್ತು ಶಾಲಾ ಆಡಳಿತ ಕಮಿಟಿಯವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. ಶಾಲೆಗೆ ಪ್ರಥಮ ಸ್ಥಾನ ಪಡೆದ ತನುಜಾ ಮಂಜುನಾಥ ನಾಯ್ಕ (611 ಅಂಕ), ಶ್ರೀಯಾ ಆದಿನಾರಾಯಣ ಹೆಗಡೆ ದ್ವಿತೀಯ ಸ್ಥಾನ (602 ಅಂಕ), ಭಾರ್ಗವ ಗಜಾನನ ಭಟ್ಟ ಮತ್ತು ತುಷಾರ ಸೀತಾರಾಮ ಹೆಗಡೆ (ತೃತೀಯ ಸ್ಥಾನ) ಹಾಗೂ ಇತರ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
  ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸ್ಥಳೀಯ ಗ್ರಾ.ಪಂ. ಅಧ್ಯಕ್ಷೆ ವೀಣಾ ಭಟ್ಟ ಅವರು ಮಾತನಾಡಿ ದಾನಿಗಳಾದ ಗುರುಪಾದ ಹೆಗಡೆಯವರ ಆಶಯದಂತೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು, ಮೊಬೈಲ್ ಎಂಬ ಸಾಧನವನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲೂ ಉತ್ತಮ ಸಾಧಕರಾಗಬೇಕು ಎಂದು ಹಾರೈಸಿದರು.
  ಶಿವಳ್ಳಿ ಸೀಮಾ ಅಧ್ಯಕ್ಷ ಮಂಜುನಾಥ ಹೆಗಡೆ ಭಾಗವಹಿಸಿದ್ದರು. ಶಾಲಾ ಆಡಳಿತ ಕಮಿಟಿಯ ಅಧ್ಯಕ್ಷ ಎಂ.ಆರ್. ಹೆಗಡೆ ಹೊನ್ನೆಕಟ್ಟಾ ಅಧ್ಯಕ್ಷತೆ ವಹಿಸಿ ಗುರುಪಾದ ಹೆಗಡೆಯವರ ದಾನ ಮಾಡುವ ಗುಣವನ್ನು ನೀವೂ ರೂಢಿಸಿಕೊಳ್ಳಬೇಕು. ಸಮಾಜದ ಒಳಿತಿಗೆ ಶ್ರಮಿಸುವಂತವರಾಗಬೇಕು ಎಂದರು.
  ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ನಿವೃತ್ತ ಶಿಕ್ಷಕ ಎಸ್.ಆರ್.ಹೆಗಡೆ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯಾಧ್ಯಾಪಕ ಶೈಲೇಂದ್ರ ಎಂ.ಎಚ್. ಅವರು ಸ್ವಾಗತಿಸಿದರೆ, ವೀಣಾ ಭಟ್ಟ ಅವರು ವಂದಿಸಿದರು. ಶಿಕ್ಷಕ ಎಂ.ಎಸ್.ಗೌಡ ಕಾರ್ಯಕ್ರಮ ನಿರ್ವಹಿಸಿದರು.

  300x250 AD
  Share This
  300x250 AD
  300x250 AD
  300x250 AD
  Back to top