ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆ ಇಸಳೂರಿನಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಸ್ವಾಮಿಗಳ 55 ನೇ ವರ್ಧಂತಿ ಉತ್ಸವವನ್ನುಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯರಾದ ವಸಂತ ಭಟ್ ಮಾತನಾಡಿ ಶ್ರೀ ಗಳ ತಪಃ ಶಕ್ತಿ ಕುರಿತು ಮಾತನಾಡಿದರು. ಹಾಗೂ ಅಂತಹ ಶ್ರೀಗಳನ್ನು ಪಡೆದ ನಾವೇ ಧನ್ಯರು ಎಂದು ಧನ್ಯತಾ ಭಾವದಿಂದ ನುಡಿದರು.
ನಂತರ ಶಾಲೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಸುಪ್ರಿಯಾ ಹೆಗಡೆ ಅವರು ಗುರುಪಾದುಕಾ ಸ್ತೋತ್ರವನ್ನು ಹೇಳಿಕೊಟ್ಟರು.ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ಸೀತಾ ಜೋಶಿ ಹಾಗೂ ಕಾರ್ಯಕ್ರಮದಲ್ಲಿ ಶಾಲೆಯಎಲ್ಲ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.