ಶಿರಸಿ : ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನಿರ್ಧೇಶನದಂತೆ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಾರ್ಗದರ್ಶನದಡಿಯಲ್ಲಿ ಜೂನ್ 25, ಶನಿವಾರದಂದು ಶಿರಸಿಯ ನ್ಯಾಯಾಲಯ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಸಂಘಟಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದಲ್ಲಿ ದಾಖಲಿಸಲ್ಪಟ್ಟ ಮತ್ತು ವಿಚಾರಣೆ ಹಂತದಲ್ಲಿರುವ ವಿವಿಧ ಬಗೆಯ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿರುವುದರಿಂದ ಲೋಕ ಅದಾಲತ್‍ಗೆ ಪ್ರಯೋಜನ ಪಡೆದುಕೊಳ್ಳಬೆಕೆಂದು 1ನೇ ಹೇಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಜಗದೀಶ ವಿ. ಅವರು ಹೇಳಿದರು.
ಅವರು ಇಂದು ಶಿರಸಿ ವಕೀಲ ಸಂಘದ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ವಕೀಲರನ್ನು ಉದ್ಧೇಶಿಸಿ ಮಾತನಾಡಿ ರಾಜಿ ಸಂದಾನದ ಮೂಲಕ ಪ್ರಕರಣ ಇತ್ಯರ್ಥವಾಗುವ ಪ್ರಯೋಜನವನ್ನ ಬಿಂಬಿಸಬೇಕು ಮತ್ತು ರಾಜಿ ಸಂದಾನದಿಂದಾಗುವ ಪ್ರಯೋಜನವನ್ನ ತಿಳಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣವನ್ನ ರಾಜಿಗೊಳಿಸಲು ಸಹಕರಿಸಲು ವಕೀಲರಲ್ಲಿ ಕೋರಿದರು.
ವೇದಿಕೆಯ ಮೇಲೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಸಿವಿಲ್ ಜಡ್ಜ ಹಿರಿಯ ವಿಭಾಗದ ನ್ಯಾಯಾಧೀಶರಾದ ಕಮಲಾಕ್ಷ ಡಿ. ಸಿವಿಲ್ ಜಡ್ಜ ಕಿರಿಯ ವಿಭಾಗದ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿಗಳಾದ ರಾಜು ಶೇಡಬಾಳಕರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಅಭಿಷೇಕ ಜೋಶಿ, ಹಿರಿಯ ವಕೀಲರಾದ ಆರ್ ಎಸ್ ಜೋಶಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ವಕೀಲರುಗಳಾದ ಎಸ್ ಕೆ ನಾಯ್ಕ, ಆರ್ ಎಸ್ ಹೊಸುರು, ಎಸ್ ಎನ್ ನಾಯ್ಕ, ಜೆ ಎಮ್ ಹೋನ್ನಾವರ, ಆರ್ ಕೆ ಹೆಗಡೆ, ರವೀಂದ್ರ ನಾಯ್ಕ, ವಿ ಎಮ್ ಹೆಗಡೆ, ಚಂದ್ರಕಾಂತ ಕುಬಾಳ, ಚಿತ್ರ ಭಗತ, ಆರ್ ವಿ ಹೆಗಡೆ, ದೀಪಕ್ ನಾಯ್ಕ ಮಂತಾದವರು ಲೋಕ ಅದಾಲತ್ ಕುರಿತು ಸಲಹೆ ಸೂಚನೆ ನೀಡಿದರು.