ಶಿರಸಿ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವಸಂತಗಳನ್ನು ಪೂರೈಸಿದ ಹಿನ್ನಲೆಯಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಶೀರ್ಷಿಕೆಯಡಿಯಲ್ಲಿ ಟಿ.ಎಸ್.ಎಸ್ ಸಂಸ್ಥೆಯ ಪಂಚವಟಿ ಜಾಗದಲ್ಲಿ ಆದಾಯ ತೆರಿಗೆ ಇಲಾಖೆ ಶಿರಸಿ ಹಾಗೂ ಟಿ.ಎಸ್.ಎಸ್. ಸಹಯೋಗದೊಂದಿಗೆ ಜೂ.೯ ರಂದು ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆದಾಯ ತೆರಿಗೆ ಅಧಿಕಾರಿಗಳಾದ ವಿ.ಎಸ್.ಉಪ್ಪಿನ್ ಹಾಗೂ ಪಿ.ಎಲ್.ಕುಂದಾಪುರ, ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ ಕಡವೆ, ಪ್ರಧಾನ ವ್ಯವಸ್ಥಾಪಕರಾದ ರವೀಶ ಅ. ಹೆಗಡೆ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.