ಶಿರಸಿ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಟಿ.ಎಸ್.ಎಸ್.ನ ಸಿ.ಪಿ.ಬಜಾರದ ನೂತನ ಸುಪರ್ ಮಾರ್ಕೆಟ್ ಕಟ್ಟಡದಲ್ಲಿ ಪ್ರಾರಂಭವಾದ ಬಂಗಾರದ ಆಭರಣ ಮಳಿಗೆಯನ್ನು ಆದಾಯ ತೆರಿಗೆ ಅಧಿಕಾರಿಗಳಾದ ವಿ.ಎಸ್.ಉಪ್ಪಿನ್ ಹಾಗೂ ಪಿ.ಎಲ್.ಕುಂದಾಪುರರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ ಕಡವೆ,ಪ್ರಧಾನ ವ್ಯವಸ್ಥಾಪಕರಾದ ರವೀಶ ಅ. ಹೆಗಡೆ, ನಿರ್ದೇಶಕರಾದ ಸಿ.ಎನ್.ಹೆಗಡೆ ಹೂಡ್ಲಮನೆ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.