ಶಿರಸಿ: ಸ್ಥಳೀಯ ಮಣಜವಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲಿನಿ ಭಟ್ ರಾಜ್ಯಮಟ್ಟದ ಮಹಿಳಾ ಕೇರಂ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ರಾಜ್ಯಸರಕಾರಿ ನೌಕರರ ರಾಜ್ಯಮಟ್ಟದ ಕೇರಂ ಪಂದ್ಯಾವಳಿ ಇತ್ತೀಚೆಗೆ ಏರ್ಪಾಟಾಗಿತ್ತು.
ಕೇರಂ ಡಬಲ್ಸ್ ವಿಭಾಗದಲ್ಲಿಯೂ ಮಾಳಂಜಿ ಶಾಲೆಯ ಶಿಕ್ಷಕಿ ಚೇತನಾ ಸಿರ್ಸಿಕರ್ ಜೊತೆಗೂಡಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಶಿರಸಿ ದೇವಿಕೆರೆಯ ಸ್ಫೂರ್ತಿ ಕೇರಂ ಅಸೋಸಿಯೇಷನ್ನಿನಲ್ಲಿ ತರಬೇತಿ ಪಡೆದಿದ್ದರು. ಇವರ ಈ ವಿಶೇಷ ಸಾಧನೆಗೆ ಉತ್ತರ ಕನ್ನಡ ಜಿಲ್ಲಾ ಕೇರಂ ಸಂಘದ ಅಧ್ಯಕ್ಷ ರವಿ ಹೆಗಡೆ ಗಡಿಹಳ್ಳಿ ಹಾಗೂ ತರಬೇತುದಾರ ಚಂದ್ರು ಭಟ್ ಇಬ್ಬರನ್ನೂ ಎಲ್ಲರ ಪರವಾಗಿ ಅಭಿನಂದಿಸಿದ್ದಾರೆ.