ಶಿರಸಿ: ಎಸ್.ಎಸ್. ಎಲ್.ಸಿ .ಮರುಮೌಲ್ಯಮಾಪನದ ನಂತರ ಹಿಂದಿ ವಿಷಯದಲ್ಲಿ 28 ಹಾಗೂ ಇಂಗ್ಲೀಷ ವಿಷಯದಲ್ಲಿ 6 ಪುನರಾವರ್ತಿತ ಅಂಕ ಪಡೆದು ಒಟ್ಟೂ 34 ಮರುಮೌಲ್ಯಮಾಪನದ ಅಂಕಗಳಿಸಿ 625ಕ್ಕೆ 623 ಅಂಕಗಳೊಂದಿಗೆ ಶಿರಸಿ ಲಯನ್ಸ ಶಾಲೆಯ ಕೃಷ್ಣ ಗಣಪತಿ ಭಟ್ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ಶಿರಸಿ ಲಯನ್ಸ ಶಾಲೆಗೆ ಎರಡನೇ ಸ್ಥಾನ ಪಡೆದಿದ್ದಾನೆ. ಈ ಫಲಿತಾಂಶದಿಂದಾಗಿ ಶಿರಸಿ ಲಯನ್ಸ ಶಾಲೆಯ 10 ವಿದ್ಯಾರ್ಥಿಗಳು ರಾಜ್ಯಮಟ್ಟದ 10 ರ್ಯಾಂಕ್ ಪಡೆದು ಲಯನ್ಸ ಶಾಲೆಯ ರ್ಯಾಂಕ್ ಸಂಸ್ಕೃತಿ ಮುಂದುವರೆಸಿ ಶಾಲೆಯ ಇತಿಹಾಸದಲ್ಲೇ ವರ್ಷವೊಂದರಲ್ಲಿ ಅತಿ ಹೆಚ್ಚು ರ್ಯಾಂಕ್ ಗಳಿಕೆಯ ಸಾಧನೆ ಪ್ರದರ್ಶಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ವೃಂದ, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ
ಮರುಮೌಲ್ಯಮಾಪನ:ಲಯನ್ಸ್ ಗೆ ಇನ್ನೊಂದು ರ್ಯಾಂಕ್ ಸಹಿತ ರಾಜ್ಯ ಮಟ್ಟದಲ್ಲಿ ಒಟ್ಟು 10 ರ್ಯಾಂಕ್
