
ಸಿದ್ದಾಪುರ: ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಕಳೆದುಕೊಂಡ ತಾಲೂಕಿನ ಅಣಲೇಬೈಲ್ ಪಂಚಾಯತ ವ್ಯಾಪ್ತಿಯ ಮೂರೂರಿನ ಹೊಸಪೇಟೇ ಬೈಲ್ ಪರಿಶಿಷ್ಟ ಕೇರಿಗೆ ಕೆಪಿಸಿಸಿ ಉಸ್ತುವಾರಿ ಸುಷ್ಮಾರಾಜಗೋಪಾಲ ಭೇಟಿ ನೀಡಿ ಸಾಂತ್ವನ ಹೇಳಿದರು. ಜನರ ಸಂಕಷ್ಟದಲ್ಲಿ ಯಾವತ್ತೂ ಜೊತೆಗಿರುವುದಾಗಿ ಹೇಳಿ ಚಾದರ ಹಾಗೂ ಚಾಪೆಗಳನ್ನು ವಿತರಿಸಿದರು.
ಹಾಗೂ ಜಾನ್ಮನೆ ವ್ಯಾಪ್ತಿಯ ರೇವಣಕಟ್ಟಾದಲ್ಲಿ ಮನೆಕಳೆದುಕೊಂಡ ಕುಟುಂಬಗಳಿಗೆ ಭೇಟಿ ನೀಡಿ ಅಕ್ಕಿ, ಹೊದಿಕೆಹಾಗೂ ಚಾಪೆಗಳನ್ನು ವಿತರಿಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಸೂರ್ಯಪ್ರಕಾಶ ಹೊನ್ನಾವರ, ಸತೀಶ್ ನಾಯ್ಕ,ರಾಜು ಉಗ್ರಾಣಕರ್, ಸೂರಜ್ ನಾಯ್ಕ್,ಜಾನಮನೆ ಪಂಚಾಯತ ಉಪಾಧ್ಯಕ್ಷೆ ನೇಹಾ ಬಾನು,ಅರುಣ ಬಣಗಾರ,ಅಬ್ದುಲ್ ಸಾಬ್ ಹೇರೂರು,ಭಾಸ್ಕರ ಹೆಗಡೆ,ಶ್ಯಾಮಸುಂದರ ನಾಯ್ಕ್,ಚಂದ್ರಕಾಂತ ನಾಯ್ಕ್,ರಾಘವೇಂದ್ರ, ಮಂಜುನಾಥ, ಮತ್ತು ಸ್ಥಳೀಯ ಮುಖಂಡರು ಇದ್ದರು.