ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಶಾಖೆ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿರಸಿ ಸಂಯುಕ್ತ ಆಶ್ರಯದಲ್ಲಿ ನೈಸರ್ಗಿಕ ಕೃಷಿಯ ಮಹತ್ವ ಮತ್ತು ತಂತ್ರಜ್ಞಾನಗಳು ಹಾಗೂ ಕಬ್ಬು ಮತ್ತು ಅಡಿಕೆ ಬೇಸಾಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆಯಿತು.
ಕೃಷಿ ವಿಜ್ಞಾನಿ ಡಾ.ಶಿವಶಂಕರ ಮೂರ್ತಿ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ ಗ್ರಾಮೀಣಾಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ್ ನಾಯ್ಕ ಮಾತನಾಡಿ, ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಸ್ವಉದ್ಯೋಗ ಮಾಡಲು ಹೈನುಗಾರಿಕೆ, ಟೇಲರಿಂಗ್, ಬ್ಯೂಟಿ ಪಾರ್ಲರ್ ಹೀಗೆ ಹಲವಾರು ತರಬೇತಿ ನೀಡುತ್ತಿದ್ದೇವೆ. ಅಂತೆಯೇ ರೈತರಿಗೆ ವಿವಿಧ ಹಂತದ ತಾಂತ್ರಿಕ ಮಾಹಿತಿ, ನೈಸರ್ಗಿಕ ಕೃಷಿ, ಕೀಟಬಾಧೆ, ಮಾರುಕಟ್ಟೆ, ಇಳುವರಿ ಹೀಗೆ ಹಲವಾರು ವಿಷಯಗಳನ್ನು ಕಾಲ ಕಾಲಕ್ಕೆ ತಿಳಿದುಕೊಳ್ಳುವುದು ಅವಶ್ಯವಿರುತ್ತದೆ. ಈ ಕಾರಣದಿಂದ ತರಬೇತಿಯನ್ನು ಹಮ್ಮಿಕೊಂಡಿದ್ದು, ರೈತರು ಪ್ರಯೋಜನ ಪಡೆದುಕೊಳ್ಳಿ ಎಂದರು.
ಸಂಪನ್ಮೂಲಧಿಕಾರಿ ಕೆವಿಕೆ ವಿಜ್ಞಾನಿ ಡಾ.ಶಿವಶಂಕರ ಮೂರ್ತಿ, ಅಡಿಕೆ ಲಾಭದಾಯಕ ಕೃಷಿ ಪದ್ಧತಿ, ತೋಟದಲ್ಲಿ ಮಳೆ ನೀರು ನಿಲ್ಲದಂತೆ ಬಸಿ ಕಾಲುವೆ ನಿರ್ವಹಣೆ, ಕೊಳೆ ರೋಗ, ಸುಳಿ ರೋಗ, ಗೊಬ್ಬರ ನಿರ್ವಹಣೆ, ಹೊಸ ತೋಟ ಮಾಡುವವರಿಗೆ ಮಣ್ಣಿನ ಹದ ಮಾಡುವುದು, ಮಡಿ ಮಾಡುವುದು, ತಳಿಗಳ ಆಯ್ಕೆ ಹೀಗೆ ಲಾಭ ದಾಯಕ ಅಡಿಕೆ ಕೃಷಿ ಬಗ್ಗೆ ಮಾಹಿತಿ ನೀಡಿದರು. ಅದೇ ರೀತಿ ಕಬ್ಬಿನ ಲಾಭದಯಕ ಕೃಷಿ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಕಬ್ಬು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಬೆಳೆಯಾಗಿದ್ದು, ಆಧುನಿಕ ಕೃಷಿ ಪದ್ಧತಿ ಹಾಗೂ ಉತ್ತಮ ತಳಿ ಆಯ್ಕೆಯ ಪದ್ಧತಿಯಿಂದ ಕಬ್ಬು ಲಾಭದಾಯಕ ಎಂದರು.
ವೇದಿಕೆ ಮೇಲೆ ಊರಿನ ಹಿರಿಯರಾದ ನಾರಾಯಣ್ ಹನುಮಾಪುರ್, ಕಾತುರ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಮುಸಲ್ಯಾನವರ, ಪೀರಣ್ಣ ಲಕ್ಷ್ಮಮಾಪುರ, ಕೆ ವಿ ಕೆ ಕೃಷಿ ವಿಜ್ಞಾನಿಗಳಾದ್ ಸಂಜೀವ್ ಎಲ್ಲೆದನಲ್ಲಿ, ಪ್ರಗತಿ ಫರ ರೈತರಾದ, ಕಲವೀರಪ್ಪ ಬೆಂಡಿಗೇರಿ ಉಪಸ್ಥಿತರಿದ್ದರು. ಸಿಬಿಡಿಆರ್ಸೆಟಿ ಫೀಲ್ಡ್ ಆಫೀಸರ್ಗಳಾದ ಶಾಂತಕುಮಾರ್ ಸ್ವಾಗತಿಸಿ ನಿರ್ವಹಿಸಿದರು. ಕೊನೆಯಲ್ಲಿ ವಿಜಯಾ ನಾಯ್ಕ ವಂದಿಸಿದರು. 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.