ಹಳಿಯಾಳ: ಸ್ಥಳೀಯ ಕೆಎಲ್‍ಎಸ್ ವಿಡಿಐಟಿ ವಿದ್ಯಾರ್ಥಿನಿಯರು ಇತ್ತೀಚೆಗೆ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಟಿಯು ಬೆಳಗಾವಿ ವಿಭಾಗ ಮಟ್ಟದ ಮಹಿಳೆಯರ ವಿಭಾಗದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.ಫೈನಲ್ ಪಂದ್ಯದಲ್ಲಿ ಬೆಳಗಾವಿಯ ಕೆಎಲ್‍ಇ ಎಮ್‍ಎಸ್‍ಎಸ್‍ಇಟಿ ತಂಡವನ್ನು ಮಣಿಸಿ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಪ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ಮಹಾವಿದ್ಯಾಲಯದ ವಿಡಿಐಟಿ ತಂಡದಿಂದ ಇ ಎಂಡ್ ಸಿ ವಿಭಾಗದ ವೈಷ್ಣವಿ ಗಿರಿ, ವೈಷ್ಣವಿ ನಾಯ್ಕ್, ಮಾನಸಿ ಬೆಣ್ಣಿ, ಕ್ವೀನಿ ಫನಾರ್ಂಡಿಸ್, ಕಂಪ್ಯೂಟರ್ ಸೈನ್ಸ್ ವಿಭಾಗದ ಶೀತಲ್ ಶಿರಗಾವಿ, ನಮ್ರತಾ ಗೊಣಗೇರಿ, ಲಕ್ಷ್ಮಿ ಚಂದರಗಿ, ಮೆಕ್ಯಾನಿಕಲ್ ವಿಭಾಗದ ಪೂಜಾ ಪಾಟೀಲ್, ಪ್ರತೀಕ್ಷಾ ಹಸಬಿಮಠ್, ಇಲೆಕ್ಟ್ರಿಕಲ್ ವಿಭಾಗದ ದಿವ್ಯಾ ಪಡವಲ್ಕರ್, ವೀಣಾ ಸಿದ್ನಾಳ್ ಮತ್ತು ಸಿವಿಲ್ ವಿಭಾಗದ ಅಪೇಕ್ಷಾ ಭಜಂತ್ರಿ ಪ್ರಮುಖ ಆಟಗಾರಾಗಿ ಪ್ರತಿನಿಧಿಸಿದ್ದರು.
ಈ ಜಯದ ಮೂಲಕ ಮುಂದೆ ನಡೆಯುವ ತಿಪಟೂರಿನ ಕಲ್ಪತರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 9 ಮತ್ತು 10ರಂದು ನಡೆಯಲಿರುವ ವಿಟಿಯು ಏಕವಲಯ ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವಿನಾಯಕ ಲೋಕುರ್, ಪ್ರಾಂಶುಪಾಲ ಡಾ.ವಿ.ಎ.ಕುಲಕರ್ಣಿ, ದೈಹಿಕ ಶಿಕ್ಷಣ ನಿರ್ದೇಶಕ ಗದಿಗೆಪ್ಪಾ ಯಳ್ಳೂರ್ ಮತ್ತು ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ನಡೆಯುವ ಪಂದ್ಯಾವಳಿಗಳಿಗೆ ಶುಭ ಹಾರೈಸಿದ್ದಾರೆ.