• first
    second
    third
    previous arrow
    next arrow
  • ಪರಿಸರ ನಾಶ ಹೆಚ್ಚಿದರೆ ಆಕ್ಸಿಜನ್ ಕೊರತೆಯಿಂದ ಬಳಲಬೇಕಾಗಬಹುದು:ಆರ್‍ಎಫ್‍ಒ ಸವಿತಾ ಎಚ್ಚರಿಕೆ

    300x250 AD

    ಹೊನ್ನಾವರ:ಇಂದು ನಾವು ಮತ್ತು ನಮ್ಮ ಪೀಳಿಗೆ ಬದುಕಬೇಕಾದರೆ ಪರಿಸರ ಸಂರಕ್ಷಿಸಬೇಕಾಗಿದೆ. ಪರಿಸರ ನಾಶದಿಂದ ಕೊರೋನಾ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಅನುಭವಿಸಿದಂತೆ ನಾವು ದಿನನಿತ್ಯ ಆಕ್ಸಿಜನ್ ಕೊರತೆಯಿಂದ ಬಳಲಬೇಕಾಗಬಹುದು ಎಂದು ಆರ್‍ಎಫ್‍ಒ ಸವಿತಾ ದೇವಾಡಿಗ ಎಚ್ಚರಿಸಿದರು.

    ತಾಲೂಕಿನ ಕೋಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ‘ವಿಶ್ವ ಪರಿಸರ ದಿನ’ವನ್ನು ತಾಲೂಕಾ ಶಿಕ್ಷಕರ ಸಂಘ ಹಾಗೂ ಮಂಕಿ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆಚರಿಸಲಾಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಇಂದು ಪರಿಸರ ಜಾಗೃತಿಯನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಪ್ರತಿಯೊಬ್ಬರು ಮನೆಯಲ್ಲಿ ಒಂದು ಗಿಡ ನೆಟ್ಟು ಸಂರಕ್ಷಿಸಬೇಕಾಗಿದೆ. ಇಂದು ನಮ್ಮ ಇಲಾಖೆ ಬೀಜೋತ್ಸವ ಕಾರ್ಯಕ್ರಮದ ಮೂಲಕ ಗಿಡಗಳ ಬೀಜಗಳನ್ನು ಪರಿಸರದಲ್ಲಿ ಬಿತ್ತಿ ನಾಡಿನ ಸಂರಕ್ಷಣೆ ಮಾಡುವ ಕೆಲಸವನನ್ನು ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕು. ಈ ಭೂಮಿ ಒಂದು ಪುಟ್ಟ ಗ್ರಾಮ. ಅದನ್ನು ರಕ್ಷಿಸಿ ಎನ್ನುವ ಘೋಷವಾಕ್ಯ ತಿಳಿಸಿದರು.

    ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಪರಿಸರ ನಾಶದಿಂದ ನಮ್ಮ ನಾಶ. ಪರಿಸರ ಮಾಲಿನ್ಯದಿಂದ ಓಝೋನ್ ಪದರದಲ್ಲಿ ಬಿರುಕು ಉಂಟಾಗಿ ನಮಗೆ ಹಲವು ಕಾಯಿಲೆಗಳಿಗೆ ಮತ್ತೆ ಭೂಮಿಯ ತಾಪಮಾನ ಹೆಚ್ಚಳಕಕ್ಕೆ ಕಾರಣವಾಗಿದೆ. ಹೊರದೇಶಗಳಲ್ಲಿ ಆಕ್ಸಿಜನ್ ಕೇಂದ್ರ ಇದ್ದಂತೆ ನಮ್ಮಲ್ಲಿಯೂ ಬರಬಹುದು. ನಾವು ಹಳ್ಳಿಗಳಲ್ಲಿ ವಾಸಿಸುವವರು ವಿಪುಲವಾಗಿ ಆಕ್ಸಿಜನ್ ಪಡೆಯುತ್ತಿದ್ದೇವೆ. ಇದನ್ನು ಹೀಗೆ ಉಳಿಸಿಕೊಳ್ಳಲು ಗಿಡಮರಗಳನ್ನು ಹೆಚ್ಚು ಬೆಳೆಸಬೇಕಾಗಿದೆ. ಇಲ್ಲದೇ ಹೋದರೆ ದೆಹಲಿಯಂತ ಪಟ್ಟಣಗಳಲ್ಲಿ ಆದ ಪರಿಸ್ಥಿತಿ ಹಳ್ಳಿಗೂ ಬರಬಹುದು ಎಂದರು.

    300x250 AD

    ಇವತ್ತು ಅರಣ್ಯ ಇಲಾಖೆ ಕಾಡನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಅನೇಕ ಯೋಜನೆಗಳನ್ನು ತರುತ್ತಿದೆ. ಇದು ಮನುಕೂಲದ ಒಳಿತಿಗಾಗಿ ಇದನ್ನು ನಮ್ಮ ಸಮಾಜ ಬೆಂಬಲಿಸಬೇಕಾಗಿದೆ. ಶಾಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಬೆಳೆಯುವ ಮಕ್ಕಳಲಲ್ಲಿ ಪರಿಸರ ಜಾಗೃತಿ ಮತ್ತು ಅzರ ಮಹತ್ವದ ಕುರಿತು ಅರಿವು ಉಂಟಾಗುತ್ತದೆ. ಇದು ಕೂಡ ಕಲಿಕೆಯ ಒಂದು ಭಾಗ. ನಮ್ಮ ಸಂಘ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಅರಣ್ಯ ಇಲಾಖೆ, ಶಾಲಾ ಶಿಕ್ಷಕವೃಂದ, ಎಸ್‍ಡಿಎಂಸಿಯವರಿಗೆ ಸಂಘದ ಪರವಾಗಿ ಅಭಿನಂದಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಾಧನಾ ಬರ್ಗಿ, ಪಂಚಾಯತ ಪಿಡಿಒ ಉಪಸ್ಥಿತರಿದ್ದರು. ಅಲ್ಲದೇ ಎಸ್‍ಡಿಎಂಸಿ ಸದಸ್ಯರು, ಊರನಾಗರಿಕರೂ, ಪಾಲಕರು, ಅರಣ್ಯ ಇಲಾಖೆ ಸಿಬ್ಬಂದಿ ಸಹ ಹಾಜರಿದ್ದರು. ಕಾಡಿನಲ್ಲಿ ಎಲ್ಲರೂ ಸೇರಿ ಬೀಜ ಬಿತ್ತಲಾಯಿತು. ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಪ್ರಾರಂಭದಲ್ಲಿ ಶಾಲಾ ಮುಖ್ಯಾಧ್ಯಾಪಕಿ ಸುನಂದಾ ಭಟ್ಟ ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ಶಿಕ್ಷಕಿ ಕಲ್ಪನಾ ಭಂಡಾರಿ ವಂದಿಸಿದರು.

    Share This
    300x250 AD
    300x250 AD
    300x250 AD
    Back to top