• Slide
    Slide
    Slide
    previous arrow
    next arrow
  • ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ 55ನೇ ವಸಂತೋತ್ಸವ ಕಾರ್ಯಕ್ರಮ ಯಶಸ್ವಿ

    300x250 AD

    ಶಿರಸಿ:ತಾಲೂಕಿನ ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಯೂಥ್ ಫಾರ್ ಸೇವಾ ಹಾಗೂ ಶ್ರೀ ಸೂರ್ಯನಾರಾಯಣ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚಿಗೆ ವಿಶ್ವ ಪರಿಸರ ದಿನಾಚರಣೆ ಹಾಗೂ 55ನೇ ವಸಂತೋತ್ಸವ ಕಾರ್ಯಕ್ರಮವನ್ನು ಗಿಡಗಳನ್ನು ನೆಡುವುದರೊಂದಿಗೆ ಪ್ರಾರಂಭಿಸಿ ಅರ್ಥಪೂರ್ಣವಾಗಿ ನಡೆಸಲಾಯಿತು.

    ನಂತರ ನಡೆದ ಸಭಾ ಕಾರ್ಯಕ್ರಮದದಲ್ಲಿ ಮುಖ್ಯೋಪಾಧ್ಯಾಯ ಗಣೇಶ ಭಟ್ ವಾನಳ್ಳಿ ಎಲ್ಲರನ್ನು ಸ್ವಾಗತಿಸಿ 55 ನೇ ವಸಂತೋತ್ಸವ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅಲ್ಲದೆ ಗಿಡಗಳ ನಿರ್ವಹಣೆ ಜವಾಬ್ದಾರಿ ನಮ್ಮದಾಗಬೇಕು ಎಂದರು. ಉದ್ಘಾಟಕರಾಗಿ ಯೂಥ್ ಫಾರ್ ಸೇವಾದ ಪರಿಸರ ರಾಜ್ಯ ಸಂಯೋಜಕರಾದ ಉಮಾಪತಿ ಭಟ್ ಮಾತನಾಡಿ ಮನುಷ್ಯ ಮರಗಳಿಲ್ಲದೆ ಬದುಕಲಾರ ಅಲ್ಲದೆ ದೇವರ ಕಾಡು, ಗಿಡದಿಂದ ಗಿಡಗಳ ಮಹತ್ವ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾಲೂಕು ಪಂಚಾಯತ್ ನರೆಗಾ ಯೋಜನೆಯ ತಾಂತ್ರಿಕ ಸಲಹೆಗಾರರಾದ ಗಣಪತಿ ಹೆಗಡೆ ಮಾತನಾಡಿ ಪರಿಸರ ಸ್ವಚ್ಛತೆ , ಪೋಷಣೆ ಗಳು ನಮ್ಮ ಧ್ಯೇಯ ಆಗಬೇಕು, ಕದಂಬ ಗಿಡದಂತ ಗಿಡಗಳನ್ನು ಬೆಳೆಯಬೇಕು ಎಂದರು.

    300x250 AD

    ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಬಸವರಾಜ ಗೌಡರು ನರೂರ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಸ್. ಎಂ. ಹೆಗಡೆ ಹುಡೇಲಕೊಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ ಹೆಗಡೆ ಹುಗ್ಗಿಕೊಪ್ಪ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಇದೆ ಸಂದರ್ಭದಲ್ಲಿ ಇ ಎಲ್ ಸಿ ಕ್ಲಬ್ ಅಡಿಯಲ್ಲಿ ಮಕ್ಕಳು ಗಿಡಗಳ ಮಹತ್ವ ಕುರಿತು ಪ್ರತಿಜ್ಞೆ ಸ್ವೀಕರಿಸಿದ್ದು ವಿಶೇಷವಾಗಿತ್ತು. ಶಿಕ್ಷಕ ಲೋಕನಾಥ ಹರಿಕಂತ್ರ ನಿರ್ವಹಿಸಿದರೆ ಶಿಕ್ಷಕ ಗಣೇಶ ಸಾಯಿಮನೆ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top