ಯಲ್ಲಾಪುರ: ವಿದ್ಯಾರ್ಥಿಗಳು ಉತ್ತಮ ನಡವಳಿಕೆಗಳ ರೂಢಿಸಿಕೊಳ್ಳುವ ಮೂಲಕ ಭವಿಷ್ಯದ ಸತ್ಪ್ರಜೆಯಾಗಬೇಕು ಎಂದು ಹೊನಗದ್ದೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಜಿ.ಭಟ್ಟ ದುಂಢಿ ಹೇಳಿದರು.
ಅವರು ಮಂಗಳವಾರ ರಾತ್ರಿ ತಾಲೂಕಿನ ತೇಲಂಗಾರ ಮೈತ್ರಿಕಲಾ ಬಳಗದಲ್ಲಿ ನಡೆದ ಮುಂಗಾರು ಕವಿಗೋಷ್ಠಿ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊವಿಡ್ ಕಾರಣಕ್ಕಾಗಿ ಈ ಬಾರಿ ಅಂಕ ನೀಡಿಕೆಯಲ್ಲಿ ಉದಾರತೆ ತೋರಲಾಗಿದ್ದು,ಈ ಅಂಕಸಾಧನೆಯ ಗೌರವ ಭವಿಷ್ಯದ ಓದಿಗೆ ಮೆಟ್ಟಿಲಾಗದೆಂದರು.
ಇದೇ ಸಂದರ್ಭದಲ್ಲಿ ಕಳೆದ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಸಿಂಚನಾ ದಾನಗೇರಿ,ವಾಣಿ ಭಟ್ಟ ಕಳಚೆ,ಯಶಸ್ ಭಾಗ್ವತ್ ನಂದೊಳ್ಳಿ,ಸಿಂಚನಾ ಹಿತ್ಲಳ್ಳಿ,ನಯನಾ ಭಟ್ಟ ವಾಗೀಶ ಬೆಟ್ನೆಮನೆ,ಶೃದ್ದಾ ಮತ್ತಿಹಕ್ಲ,ಶ್ರೀಗೌರಿ ಬಾಗಿನಕಟ್ಟಾ ಇವರನ್ನು ಪುರಸ್ಕರಿಸಲಾಯಿತು.
ಬಳಗದ ಪ್ರಮುಖರಾದ ನಾಗಪ್ಪ ಗಾಂವ್ಕಾರ ಗೋಡೆಪಾಲ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಗ್ರಾ.ಪಂ ಉಪಾಧ್ಯಕ್ಷೆ ರತ್ನಾ ಬಾಂದೇಕರ,ಸದಸ್ಯರಾದ ಜಿ.ಆರ್.ಭಾಗ್ವತ್ ತಾರಿಕುಂಟೆ,ಗಜಾನನ ಭಟ್ ಕಳಚೆ,ಸರ್ವೋದಯ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಕೆ.ಭಟ್ಟ,ಪಾಲಕರಾದ ಗಣಪತಿ ಹೆಗಡೆ ಹಿತ್ಲಳ್ಳಿ ಮಾತನಾಡಿದರು.
ಮುಂಗಾರು ಕವಿಗೋಷ್ಠಿಯಲ್ಲಿ ಕವಿಗಳಾದ ವನರಾಗ ಶರ್ಮಾ,ದತ್ತಾತ್ರಯ ಕಣ್ಣಿಪಾಲ,ಸತ್ಯನಾರಾಯಣ ಚಿಮನಳ್ಳಿ,ಗಣಪತಿ ಕಂಚಿಪಾಲ್,ಶಿವರಾಮ ಗಾಂವ್ಕಾರ ಕಲ್ಮನೆ, ಶ್ರೀಗೌರಿ ಬಾಗಿನಕಟ್ಟಾ ಕವಿತೆ ವಾಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಕವಿ ಸುಬ್ರಾಯ ಬಿದ್ರೆಮನೆ ಮಾತನಾಡಿ,”ಕವಿತೆ ಸರಳವಾಗಿರಲಿ.ವಾಸ್ತವಿಕತೆಗೆ ಹತ್ತಿರವಾಗಿರಲಿ.ಓದಿನ ಅನುಭವದಿಂದ ಪಕ್ವತೆ ಸಾಧಿಸಬೇಕು.ಕವಿತೆ ಬರಿ ಶಬ್ದಗಳ ಆಡಂಬರವಾಗದೇ,ನಯವಾಗಿ ಅರಳುವಂತಾಗಬೇಕು” ಎಂದರು.
ಮೈತ್ರಿ ಪ್ರಾರ್ಥಿಸಿದರು. ಬಳಗದ ಅಧ್ಯಕ್ಷ ಜಿ.ಎಸ್.ಗಾಂವ್ಕಾರ ಸ್ವಾಗತಿಸಿದರು.ಕಾರ್ಯದರ್ಶಿ ಮಂಜುನಾಥ ಮೂಲೆಮನೆ ನಿರೂಪಿಸಿದರು.ಬಳಗದ ಸದಸ್ಯ ಸತ್ಯನಾರಾಯಣ ಚಿಮ್ನಳ್ಳಿ ವಂದಿಸಿದರು.
ಅಗಲಿದ ಶಿಕ್ಷಕ ವಿ.ಎಸ್.ಭಟ್ಟ ಅಬ್ಬಿತೋಟ,ಅಂಚೆ ಸಹಾಯಕ ಭಾಸ್ಕರ ಭಟ್ ಹಳವಳ್ಳಿ ಅವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.