ಶಿರಸಿ; ಮಾರ್ಚ 2022 ರಲ್ಲಿ ಜರುಗಿದ ಎಂ.ಕಾಂ 3 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯವು ಶೇಕಡಾ 100% ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಒಟ್ಟೂ 36 ವಿದ್ಯಾರ್ಥಿಗಳು ಕುಳಿತಿದ್ದು 1 ವಿದ್ಯಾರ್ಥಿ ಉನ್ನತ ಶ್ರೇಣಿ ಹಾಗೂ 35 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿಗೆ ಕುಮಾರಿ ದಿವ್ಯಾ ರಮೇಶ ನಾಡಿಗ ಪ್ರಥಮ, ಕುಮಾರಿ ಚೈತ್ರಾ ಪಿ ಬಿಲ್ಲವ ದ್ವಿತೀಯ, ಕುಮಾರಿ ಹರ್ಷಿತಾ ಹೆಗಡೆ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕೆ ಎಂ.ಇ.ಎಸ್ ಆಡಳಿತ ಮಂಡಳಿಯ ಅಧ್ಯಕ್ಷರು, ಗೌರವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಸದಸ್ಯರು, ಮಹಾವಿದ್ಯಾಲಯದ ಉಪಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹರ್ಷವ್ಯಕ್ತಪಡಿಸಿದ್ದಾರೆ.