ಯಲ್ಲಾಪುರ:ಹದಿನೆಂಟು ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಆಕ್ರಮಣ, ಕಿರುಕುಳ, ಮಕ್ಕಳನ್ನು ಲೈಂಗಿಕ ಸಂಪರ್ಕಕ್ಕೆ, ಪ್ರಚೋದನೆ ನೀಡುತ್ತಿದ್ದರೆ ಮಕ್ಕಳ ಸಹಾಯವಾಣಿ 1098ಕ್ಕೆ ದೂರು ನೀಡಬಹುದು ಅಥವಾ ಹತ್ತಿರದ ಪೆÇಲೀಸ್ ಠಾಣೆಗೆ ಮಕ್ಕಳ ಕಲ್ಯಾಣ ಸಮಿತಿಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಮಹೇಶ್ ಜಿ. ಹೇಳಿದರು.
ತಾಲೂಕಿನ ಉಮ್ಮಚಗಿ ಸರ್ಕಾರಿ ಪ್ರೌಢಶಾಲೆ ಹಾಗೂ ಭರತನಹಳ್ಳಿ ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯಿದೆ ಹಾಗೂ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದ ಎದುರಿಸುವ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದವರು ಮಾಹಿತಿ ನೀಡಿದರು.
ಪೋಕ್ಸೋ ಕಾಯಿದೆ 2012, ಬಾಲನ್ಯಾಯ ಕಾಯಿದೆ 2015, ಮಾದರಿ ನಿಯಮ 2016ರಲ್ಲಿ ಬರುವ ಕಲಂ 2/14 ಪಾಲನೆ ಮತ್ತು ರಕ್ಷಣೆ, ಬಾಲನ್ಯಾಯ ಮಂಡಳಿ ಕಲಂ 4ರ ಮಕ್ಕಳ ಕಲ್ಯಾಣ ಸಮಿತಿ ಕಲಂ 27, ಕಲಂ 75, ಕಲಂ 106 ಮತ್ತು 107 ಇವುಗಳ ಕುರಿತು ಮಾಹಿತಿ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಫಾತಿಮಾ ಚುಳಕಿ, ಪಿಎಸ್‍ಐ ಅಮೀನ್ ಅತ್ತರ್ ಪೋಕ್ಸೋ ಮಾದಕವಸ್ತುಗಳ ದುಷ್ಪರಿಣಾಮ, ಸಾಮಾಜಿಕ ಜಾಲತಾಣಗಳ ಅತೀಯಾದ ಬಳಕೆಯಿಂದಾಗುವ ಕೆಟ್ಟ ಪರಿಣಾಮಗಳು ಹಾಗೂ 112 ಸಹಾಯ ವಾಣಿಯ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098 ಕುರಿತು ಕಿರುಚಿತ್ರವನ್ನು ಮಕ್ಕಳಿಗೆ ಪ್ರದರ್ಶಿಸಲಾಯಿತು. ಹಾಗೂ ಪೋಸ್ಟರ್ ಗಳನ್ನು ಶಾಲೆಗಳಿಗೆ ಮತ್ತು ಮಕ್ಕಳಿಗೆ ನೀಡಲಾಯಿತು. ಸಂದರ್ಭದಲ್ಲಿ ಶಿಕ್ಷಕರು, ಸಾರ್ವಜನಿಕರು ಮಕ್ಕಳು ಭಾಗವಹಿಸಿದ್ದರು.