• first
    second
    third
    previous arrow
    next arrow
  • ಟಿಪ್ಪರ್ ಗೆ ಕಾರು ಡಿಕ್ಕಿ: ಪ್ರಕರಣ ದಾಖಲು

    300x250 AD

    ಕಾರವಾರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಚೆಂಡಿಯಾ ಬಳಿ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ಚಾಲಕ ವಾಹನವನ್ನು ಹೆದ್ದಾರಿಯಿಂದ ಬಲಕ್ಕೆ ಯುಟರ್ನ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ಅಂಕೋಲಾ ಕಡೆಯಿಂದ ಕಾರವಾರ ಕಡೆಗೆ ಸಾಗುತ್ತಿದ್ದ ಕಾರು, ಟಿಪ್ಪರ್ ಗೆ ಗುದ್ದಿದೆ.

    ಕಾರಿನ ಮುಂಭಾಗ ಜಖಂಗೊoಡಿದ್ದು, ಕಾರಿನಲ್ಲಿ ಇದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top