ಭಟ್ಕಳ: ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಸರ್ಕಲ್ಗೆ ತಿರಂಗಾ ಸರ್ಕಲ್ ಎಂದು ನಾಮಕರಣ ಮಾಡುವಂತೆ ತಾಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ಶಾಸಕ ಸುನೀಲ ನಾಯ್ಕರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಈಗಿರುವ ಭಟ್ಕಳ ವೃತ್ತ (ಸರ್ಕಲ್) ತೆರವಾಗಲಿದ್ದು, ಈ ಜಾಗದಲ್ಲಿ ಭಟ್ಕಳದ ಪ್ರತಿಷ್ಟೆ ಮತ್ತು ಗೌರವದ ಸಂಕೇತವಾಗಿ ಪುನಃ ದೊಡ್ಡ ಪ್ರಮಾಣದಲ್ಲಿ ಸರ್ಕಲ್ ನಿರ್ಮಿಸಿ, ದೇಶಕ್ಕೆ ಮತ್ತು ದೇಶದ ಧ್ವಜಕ್ಕೆ ಗೌರವ ನೀಡುವ ಉದ್ದೇಶದಿಂದ ‘ತಿರಂಗ ಸರ್ಕಲ್’ ಎಂದು ನಾಮಕರಣ ಮಾಡಬೇಕೆಂದು ಐ ಆರ್ ಬಿ ಮತ್ತು ಜಿಲ್ಲಾಡಳಿತಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಮಹೇಂದ್ರ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಉದಯ ದೇವಾಡಿಗ, ತಾಲೂಕು ಪ್ರಧಾನ ಕಾರ್ಯದರ್ಶಿ ರವೀಶ್ ನಾಯ್ಕ, ಕಿರಣ ನಾಯ್ಕ, ಉಪಾಧ್ಯಕ್ಷ ಚಂದ್ರು ನಾಯ್ಕ, ತಾಲೂಕ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಹೇಮಂತ ನಾಯ್ಕ ಸದಸ್ಯರಾದ ವೆಂಕಟೇಶ ನಾಯ್ಕ, ಉಮೇಶ್ ನಾಯ್ಕ, ವಿನೋದ ದೇವಾಡಿಗ, ದುರ್ಗೇಶ ನಾಯ್ಕ, ಯಶವಂತ ನಾಯ್ಕ ಮುಂತಾದವರು ಇದ್ದರು.