
ಅಂಕೋಲಾ : ತಾಲೂಕಿನ ಡೋಂಗ್ರಿ ಪಂಚಾಯತಿಗೆ ಸಂಪರ್ಕಿಸುವ ಗುಳ್ಳಾಪುರ-ಕಮ್ಮಾಣಿಯ ಪ್ರಮುಖ ಸೇತುವೆ ಕುಸಿದಿದ್ದು ಶಾಸಕಿ ರೂಪಾಲಿ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಂಗಾವಳಿ ನದಿಯ ಪ್ರವಾಹದಿಂದ ಯಲ್ಲಾಪುರ ಮಾರ್ಗವಾಗಿ ಡೋಂಗ್ರಿ ಸಂಪರ್ಕದ ಸೇತುವೆ ಕೊಚ್ಚಿಹೋಗಿದೆ. ಡೋಂಗ್ರಿ ಗ್ರಾಮಕ್ಕೆ ಈಗ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ. ಮಳಲಗಾಂವ ಸೇತುವೆಗೂ ಸಹ ಭಾಗಶಃ ಹಾನಿಯಾಗಿದ್ದು, ಓಡಾಡುವಾಗ ಜನರು ಎಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದರು
ಡೋಂಗ್ರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ದಿನನಿತ್ಯದ ಬಳಕೆಗೆ ಅವಶ್ಯಕವಿರುವ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ತಾಲೂಕಾಡಳಿತಕ್ಕೆ ಸೂಚನೆ ನೀಡಿದ ಅವರು
ಗಂಗಾವಳಿಯಲ್ಲಿ ನೀರಿನ ಪ್ರವಾಹ ಇಳಿದ ನಂತರ ದೋಣಿಗಳು ಹಾಗೂ ಲೈಫ಼್ ಜ್ಯಾಕೆಟ್ ವ್ಯವಸ್ಥೆ ಮಾಡಬೇಕು ಎಂದು ತಹಶಿಲ್ದಾರರಿಗೆ ಸೂಚಿಸಿದರು
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಅಂಕೋಲಾ ನಗರ ಮಂಡಲದ ಅಧ್ಯಕ್ಷ, ಜಿ.ಪಂ. ಸಿಇಒ, ಸ್ಥಳೀಯರು, ಪಕ್ಷದ ಪದಾಧಿಕಾರಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.