• first
    second
    third
    previous arrow
    next arrow
  • ಆಡುಭಾಷೆಯಲ್ಲಿ ಸಂಸ್ಕೃತ ಹಾಸುಹೊಕ್ಕಾಗಿದೆ: ಡಾ.ಮಹೇಶ ಭಟ್

    300x250 AD

    ಯಲ್ಲಾಪುರ: ಸಂಸ್ಕೃತ ಭಾಷೆ ಎಲ್ಲ ಭಾಷೆಗಳ ಮೂಲ ಭಾಷೆ , ಆಡುಭಾಷೆಯಲ್ಲಿ ಸಂಸ್ಕೃತ ಹಾಸುಹೊಕ್ಕಾಗಿದೆ. ವೈಜ್ಞಾನಿಕವಾಗಿ ಗುರುತಿಸಲ್ಪಟ್ಟ ಭಾಷೆ. ಗಣಿತ ವಿಷಯದಲ್ಲಿಯೂ ತನ್ನ ಪ್ರಭಾವ ಬೀರಿದೆ. ಆಧುನಿಕ ಯುಗದಲ್ಲಿಯೂ ಪ್ರಸ್ತುತದಲ್ಲಿ ಇರುವ ಭಾಷೆ ಹಾಗೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಎಲ್ಲರೂ ಸಂಸ್ಕೃತ ಭಾಷೆಯನ್ನು ಅಭ್ಯಸಿಸಬೇಕು ಎಂದು ಉಮ್ಮಚಗಿ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ ಸಂಸ್ಕೃತ ರತ್ನ ಡಾ.ಮಹೇಶ ಭಟ್ ಹೇಳಿದರು.

    ಅವರು ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಸಂಸ್ಕೃತ ಭಾಷೆ ಪ್ರೇರಣಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯ ಮಹತ್ವ, ಸಂಸ್ಕೃತ ಭಾಷೆಯ ಬಳಕೆ, ಸಂಸ್ಕಾರ ಮತ್ತು ಸಂಸ್ಕೃತಿಯೊಂದಿಗೆ ಸಂಸ್ಕೃತದ ಛಾಪು ಇವುಗಳ ಕುರಿತು ವಿಸ್ತಾರವಾಗಿ ತಿಳಿಸಿಕೊಟ್ಟರು.

    300x250 AD

    ವಿದ್ಯಾರ್ಥಿಗಳಾದ ಭುವನ್ ಹಾಗೂ ನಮನ ಎಸ್ ಕೆ ಯವರ ವೇದಘೋಷದೊಂದಿಗೆ ಶಿಬಿರ ಪ್ರಾರಂಭವಾಯಿತು. ದಿಶಾ ಹೆಗಡೆ, ಪ್ರಣತಿ ಮೆಣಸುಮನೆ, ಹರ್ಷಿತಾ ಭಟ್ಟ ಸಿಂಚನ ಭಟ್, ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಪ್ರತಿಮಾ ಭಟ್ ಸ್ವಾಗತಿಸಿ ನಿರೂಪಿಸಿದರು. ಗಿರೀಶ್ ಭಟ್ ವಂದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ವ್ಯವಸ್ಥಾಪಕ ಗುರುರಾಜ ಕುಂದಾಪುರ, ಪ್ರಾಂಶುಪಾಲೆ ಮಹಾದೇವಿ ಭಟ್ಟ, ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top