ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ (ರಿ) ವತಿಯಿಂದ ಶಿರಸಿ ಶೈಕ್ಷಣಿಕ ಜಿಲ್ಲೆಯ ಅನುದಾನ ರಹಿತ ಶಾಲೆಗಳಲ್ಲಿ 100 ಕ್ಕೆ 100 ಫಲಿತಾಂಶ ಪಡೆದ ಶಾಲೆಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಶಿವಕುಮಾರ ಗೌಡ, ಅಧ್ಯಕ್ಷರು, ಎ.ಪಿ.ಎಂ.ಸಿ. ಶಿರಸಿ ಇವರು ದೀಪ ಬೆಳಗಿಸಿ ಮಾತನಾಡಿದರು. ಅತಿ ಹೆಚ್ಚು ಅಂಕ ಪಡೆಯಲು ಕಾರಣೀಕರ್ತರಾದ ಶಿಕ್ಷಕ ವರ್ಗದವರಿಗೆ ಶಾಲೆಗೆ ಸನ್ಮಾನ ಮಾಡಿ ಗೌರವಿಸುವುದು ತುಂಬಾ ಸಂತಸದ ವಿಷಯವಾಗಿದೆ ಎಂದರು.
ಅದೇ ರೀತಿ ದ್ಯಾಮಣ್ಣ ದೊಡ್ಮನಿ, ಅಧ್ಯಕ್ಷರು ವ್ಯವಸಾಯ ಸೇವಾ ಸಹಕಾರಿ ಸಂಘ ದಾಸನಕೊಪ್ಪ ಮಾತನಾಡಿ ಖಾಸಗಿ ಶಾಲಾ ಶಿಕ್ಷಕರು ಅತಿ ಕಡಿಮೆ ವೇತನ ತೆಗೆದುಕೊಂಡು ಹೆಚ್ಚು ಪರಿಶ್ರಮ ಪಡುವವರಾಗಿದ್ದು ಈ ನಿಟ್ಟಿನಲ್ಲಿ ಈ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ಲಕ್ಷ್ಮೀ ಭಟ್ಟ ಅವರ ವಿಶೇಷ ಮುತುವರ್ಜಿ ಮಾಡಿ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾದ ಕ್ರಮ ಎಂದಿದ್ದಾರೆ.
ಇನ್ನೋರ್ವ ಅತಿಥಿಗಳಾದ ಪ್ರಶಾಂತ ಸಂತೊಳ್ಳಿ ನಿರ್ದೇಶಕರು, ಎ.ಪಿ.ಎಂ.ಸಿ. ಸಿರ್ಸಿ ಮಾತನಾಡಿ ಎಲ್ಲಾ ಮಕ್ಕಳನ್ನೂ ಪಾಸ ಮಾಡಿಸುವ ಜವಾಬ್ದಾರಿ ಹೊತ್ತ ಶಿಕ್ಷಕ ವರ್ಗವನ್ನು ನೋಡುವುದಾದರೆ ಖಾಸಗಿ ಶಾಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ ಎಂದರು.
ಮತ್ತೋರ್ವ ಅತಿಥಿಗಳಾದ ಅರವಿಂದ ತೆಲಗುಂದ ಶಿಕ್ಷಣದಲ್ಲಿ ಖಾಸಗಿ ಎಂಬ ಶಬ್ದ ಬರದೇ ಎಲ್ಲ ಶಿಕ್ಷಣ ಕೇಂದ್ರಗಳು ಸರಕಾರವೇ ನಡೆಸುವಂತಾದರೆ ಶಿಕ್ಷಕರಿಗೆ ಉತ್ತಮ ಜೀವನ ಪಾಲಕರಿಗೆ ಕಡಿಮೆ ಆರ್ಥಿಕ ಹೊರೆ ಆಗುವುದು ಮುಂದಿನ ದಿನಗಳಲ್ಲಿ ಎಂದರು.
ಶ್ರೀಮತಿ ಲಕ್ಷ್ಮೀ ಭಟ್ ಪ್ರಧಾನ ಕಾರ್ಯದರ್ಶಿ ಕ. ರಾ. ಖಾ. ಶಾ. ಶಿ ಓ. (ರಿ) ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರ ನೀಡುತ್ತಿರುವ ಪ್ರಶಸ್ತಿಗಳಲ್ಲಿ ಉಂಟಾದ ತಾರತಮ್ಯದ ಬಗ್ಗೆ ವಿವರಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ಎಂ.ಬಿ. ಭಟ್ಟ ಬೆಳಗಾವಿ ಸ್ವಾಗತಿಸಿದರು. ವಹಿದುಲಹೈ ಪಾಟೀಲ್ ಉಪಾಧ್ಯಕ್ಷರು ಹಳಿಯಾಳ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಬಂಗಳೆ ವಂದಿಸಿದರು. ಶ್ರೀ ಶಾಂತಾರಾಮ ನಾಯ್ಕ ಅಧ್ಯಕ್ಷರು ಕ. ರಾ. ಖಾ. ಶಾ. ಓ. (ರಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು. ಕು. ರಂಜನಾ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು.