ಹಳಿಯಾಳ: ಕೆಎಲ್‍ಎಸ್ ವಿಡಿಐಟಿಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಉಚಿತ ಸಿ.ಇ.ಟಿ ತರಬೇತಿ ಶಿಬಿರ ಇತ್ತೀಚಿಗೆ ಮುಕ್ತಾಯಗೊಂಡಿತು.
ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿ.ಎ.ಕುಲಕರ್ಣಿ, ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಶೈಕ್ಷಣಿಕ ಸಾಧನೆ ತೋರುವಂತಾಗಲಿ ಎಂದು ಹಾರೈಸಿದರು. ಬೆಳಗಾವಿಯ ವಿವಾಸಾ ಅಕಾಡೆಮಿಯ ವಿಷಯ ತಜ್ಞರಾದ ಪ್ರೊ.ವಿವೇಕಾನಂದ ಖೋತ್ ಉಪಸ್ಥಿತರಿದ್ದರು.
ತರಬೇತಿಯ ಅವಧಿಯಲ್ಲಿ ನಡೆಸಿದ ಅಣಕು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ಬಾಗಲಕೋಟೆ ಜಿಲ್ಲೆ ಬೀಳಗಿಯ ಸುನಿಲ್ ಆರ್.ಡಿ, ಮೌನೀಶ್ ಎನ್.ಬಿ, ಶಿರಸಿಯ ಸಂಧ್ಯಾ ಭಟ್, ಚರಣ್ ಜಿ, ಚಿದಂಬರ ಗೌಡಾ, ರಂಜಿತಾ ಎಚ್, ಗಣೇಶ ತಲವಾರ್, ರಾಜೇಶ ನಾಯ್ಕ, ಯಲ್ಲಾಪುರದ ಜ್ಯೋತಿ ನಾಯ್ಕ್, ಉದಯ ಗೌಡಾ, ಹಳಿಯಾಳದ ಲಕ್ಷ್ಮಣ್ ಎನ್. ಮತ್ತು ಸಕ್ಕು ಬಿ. ಅವರುಗಳಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಯಿತು. ಅನೇಕ ವಿದ್ಯಾರ್ಥಿಗಳು ತರಬೇತಿಯ ಆಯೋಜನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೊ .ಎಸ್.ಡಿ.ಕುಲಕರ್ಣಿ ನಿರೂಪಿಸಿದರು. ಡಾ.ಆರ್.ಎಸ್ ಮುನ್ನೊಳ್ಳಿ, ಡಾ.ಸಮೀರ ಗಲಗಲಿ, ಡಾ.ವಿನೋದ ನಾಯ್ಕ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಜಯಪುರ, ಬಾಗಲಕೋಟ, ಹುಬ್ಬಳ್ಳಿ, ಧಾರವಾಡ, ಶಿರಸಿ, ಸಿದ್ದಾಪುರ, ಯಲ್ಲಾಪುರ, ದಾಂಡೇಲಿ, ಅಳ್ನಾವರ ಮತ್ತು ಸ್ಥಳೀಯ ಭಾಗದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಯಿತು.