ಅಂಕೋಲಾ: ತಾಲೂಕಿನ ಕೆ.ಎಲ್.ಇ ಸಂಸ್ಥೆಯ ಸಭಾಭವನದಲ್ಲಿ ನಡೆದ ಪಶ್ಚಿಮ ಶಿಕ್ಷಕ ಮತದಾರರ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಬಸವರಾಜ ಹೊರಟ್ಟಿಯವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಭಾಗವಹಿಸಿ ಮತ ಯಾಚಿಸಿದರು.
ಬಸವರಾಜ ಹೊರಟ್ಟಿಯವರು ಹಿರಿಯ ರಾಜಕಾರಣಿಯಾಗಿದ್ದು, ಈ ರಾಜ್ಯಕ್ಕೆ ಅವರ ಸೇವೆ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಅವರನ್ನು ಬೆಂಬಲಿಸಿ ಎಂದು ಹೇಳಿದರು. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರವೊಂದಿದ್ದರೆ ಅದು ಬಸವರಾಜ ಹೊರಟ್ಟಿ ಮಾತ್ರ ಎಂದರು.
ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಇಲ್ಲಿಯವರೆಗೆ ನಾನು ಶಿಕ್ಷಕರ ಪರವಾಗಿ ನಿಂತಿದ್ದು ಮುಂದೆಯೂ ಸಹ ಶಿಕ್ಷಕರ ನೋವನ್ನು ನನ್ನ ನೋವೆಂದು ಬಾವಿಸಿ ಸ್ಪಂದಿಸುತ್ತೇನೆ, ನನ್ನ ಅವಧಿಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿ,ಪರೀಕ್ಷೆ ವೇಳೆ ಬದಲಾವಣೆ ಮುಂತಾದ ಸಮಸ್ಯೆಗಳನ್ನು ಆಗಲು ಬಿಡಲಿಲ್ಲ, ಈ ಹಿಂದಿನ ಚುನಾವಣೆಗಿಂತ ಈ ಚುನಾವಣೆಯಲ್ಲಿ ನನಗೆ 40% ಮತಗಳು ಹೆಚ್ಚಲಿದೆ ಎನ್ನುವ ಭರವಸೆ ನನಗಿದೆ ಎಂದರು.
ಕೆ.ಎಲ್.ಇ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ ಸ್ವಾಗತಿಸಿದರು. ಜೈ ಹಿಂದ್ ಹೈಸ್ಕೂಲಿನ ಮುಖ್ಯಾಧ್ಯಾಪಕ ಪ್ರಭಾಕರ ಬಂಟ್ ಪ್ರಾಸ್ತಾವಿಕ ನುಡಿದರು. ಶಿಕ್ಷಕ ಜಿ.ಆರ್.ತಾಂಡೇಲ್ ವಂದಿಸಿದರು. ಈ ಸಂದರ್ಭದಲ್ಲಿ ಗಣಪತಿ ಉಳ್ವೆಕರ್, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವ್ಕರ್, ನಿವೃತ್ತ ಮುಖ್ಯಾಧ್ಯಾಪಕ ರವೀಂದ್ರ ಕೇಣಿ, ಬಿಜೆಪಿ ಪ್ರಮುಖರಾದ ಗೋವಿಂದ್ ನಾಯ್ಕ, ಸಂಜಯ ನಾಯ್ಕ ಭಾವಿಕೇರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.