• Slide
    Slide
    Slide
    previous arrow
    next arrow
  • ಕಳ್ಳತನ ಪ್ರಕರಣ; ಮೂವರು ಆರೋಪಿಗಳ ಬಂಧನ

    300x250 AD

    ಮುಂಡಗೋಡ: ತಾಲೂಕಿನಲ್ಲಿ ಈತ್ತೀಚೆಗೆ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಮೂವರನ್ನು ಬಂಧಿಸಿದ್ದಾರೆ.

    ಶಿರಸಿಯ ಸಲೀಮ್ ಅನ್ವರ್ ಸಾಬ್, ಅಬ್ದುಲ್ ಸತ್ತಾರ್ ಮುಲ್ಲಾ ಹಾಗೂ ಇರ್ಫಾನ್ ಶೇಖ್ ಬಂಧಿತರು. ಮೇ 20ರಂದು ರಾತ್ರಿ ಮಳಗಿ ಗ್ರಾಮದ ಕಾಳೆಬೈಲ್ ಹೊಸಕೊಪ್ಪ ಗ್ರಾಮದ ನಿವಾಸಿ ಹಜರತ್ ಅಲಿ ಹುಸೇನಸಾಬ್ ಯಲಿವಾಳ ಅವರಿಗೆ ಸೇರಿದ ಅಂಗಡಿಯ ಚಾವಣಿ ತಗಡು (ಶೀಟ್) ತೆಗೆದು ಒಳಗಿಳಿದು ಅಂಗಡಿಯ ಹಿಂದಿನ ಬಾಗಿಲಿನಿಂದ ಕಿರಾಣಿ ವಸ್ತು ಹಾಗೂ ಫ್ರಿಡ್ಜ್ ಸಮೇತ 63,465 ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದರು.

    300x250 AD

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಖಚಿತ ಸುಳಿವಿನ ಮೇರೆಗೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಪಿಐ ಎಸ್.ಎಸ್.ಸಿಮಾನಿ, ಪಿಎಸೈಗಳಾದ ಬಸವರಾಜ ಮಬನುರ್, ಎನ್.ಡಿ.ಜಕ್ಕಣ್ಣವರ, ಎಎಸ್‍ಐ ಮಣಿ ಮಾಲನ್ ಮೇಸ್ತ್ರಿ, ಸಿಬ್ಬಂದಿ ರಾಜೇಶ ನಾಯ್ಕ, ಮಾರುತಿ ಮಾಳಗಿ, ಗಣಪತಿ ಹುನ್ನಳ್ಳಿ, ವಿನೋದಕುಮಾರ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಮಾಣಿ, ಪ್ರಕಾಶ ಶ್ರಿಂಗೇರಿ ಕಾರ್ಯಾಚರಣೆಯಲ್ಲಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top