ಕಾರವಾರ: ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಹಾಗೂ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರದ ಕಡೆಗೆ ನಡೆ ಎಂಬ ಧ್ಯೇಯದೊಂದಿಗೆ ನಡೆಸಲಾಗಿದ್ದ ಕಾರವಾರ ಟು ಕುದುರೆಮುಖ ಚಾರಣವನ್ನು ನೌಕಾಸೇನಾಧಿಕಾರಿಗಳ ತಂಡ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ನೇವಲ್ ಶಿಪ್ ರಿಪೇರ್ ಯಾರ್ಡ್ ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ದೀಪಕ್ ಕೆ.ಗೋಸ್ವಾಮಿ ಈ ಚಾರಣಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದ್ದರು. ವೆಸ್ಟರ್ನ್ ನೇವಲ್ ಕಮಾಂಡ್‌ನ ಕಮಾಂಡರ್ ದಿನೇಶ್ ನೇತೃತ್ವದ 20 ಸಿಬ್ಬಂದಿಯ ತಂಡವು 750 ಕಿ.ಮೀ. ದೂರವನ್ನು ರಸ್ತೆ ಮತ್ತು ಭಾಗಶಃ ಪಾದಯಾತ್ರೆಯ ಮೂಲಕ ಜೂ.04ರಂದು ಕುದುರೆಮುಖದ (6214 ಅಡಿ) ಶಿಖರವನ್ನು ಏರಿತು. ಕುದುರೆಮುಖ ಕರ್ನಾಟಕದ ಎರಡನೇ ಎತ್ತರದ ಸ್ಥಳವಾಗಿದ್ದು, ರಾಜ್ಯದ ಅತ್ಯಂತ ಕಷ್ಟಕರವಾದ ಮತ್ತು ಅಷ್ಟೇ ಸುಂದರವಾದ ಪಾದಯಾತ್ರೆಯ ಹಾದಿಗಳಲ್ಲಿ ಒಂದಾಗಿದೆ. ದಾರಿಯುದ್ದಕ್ಕೂ ತಂಡವು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಪ್ರೇರಕ ಸಂವಾದದಲ್ಲಿ ತೊಡಗಿಕೊಂಡಿತು. ಸಶಸ್ತ್ರ ಪಡೆಗಳಿಗೆ ಸೇರಲು ಯುವಕರನ್ನು ಪ್ರೇರೇಪಿಸಿತು.