ಕಾರವಾರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅಮದಳ್ಳಿಯ ವೀರಗಣಪತಿ ಸಂಸ್ಥಾನದ ಹೂವಿನ ತೋಟದಲ್ಲಿ ಬೇರೆ ಬೇರೆ ಜಾತಿಯ 50ಕ್ಕೂ ಹೆಚ್ಚಿನ ಔಷಧದ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಅಂಕೋಲಾ ಅರಣ್ಯ ಇಲಾಖೆಯ ಸಹಕಾರದಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ಅಂಕೋಲಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯಕ, ವೀರಗಣಪತಿ ಸಂಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶಿವಪ್ರಸಾದ ಜಿ.ಕೆ., ಉಪಾಧ್ಯಕ್ಷ ರವೀಂದ್ರ ಅಮದಳ್ಳಿ, ಕಾರ್ಯದರ್ಶಿ ವಿ.ಪಿ.ಗಾಂವಕರ, ಸದಸ್ಯರಾದ ಸುಭಾಷ ನಾಯ್ಕ, ಜಿ.ಡಿ.ಗೋವಿಂದಕುಮಾರ, ಸಂಸ್ಥಾನದ ವ್ಯವಸ್ಥಾಪಕ ಗಜಾನನ ನಾಯ್ಕ, ಅರವಿಂದ ಚಿಂಚಣಕರ, ಸಿಬ್ಬಂದಿ ದಿಗಂಬರ ನಾಯ್ಕ, ಮಂಜುನಾಥ ಗೌಡ, ಊರಿನ ಪ್ರಮುಖ ರಾಜೇಶ ನಾಯ್ಕ ಮುಂತಾದವರು ಇದ್ದರು.