ಶಿರಸಿ: ದಿ ತೋಟಗಾರ್ಸ್-ಕೋ-ಆಪರೇಟಿವ್ ಸೇಲ್ ಸೊಸೈಟಿ ವತಿಯಿಂದ 2022ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಅತಿ ಹೆಚ್ಚು ಅಂಕ ಪಡೆದು ಸ್ಥಾನಗಳಿಸಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯದಲ್ಲಿ ಟಾಪ್ 10 ರ‍್ಯಾಂಕ್ ಗಳಿಸಿರುವ 18 ವಿದ್ಯಾರ್ಥಿಗಳಿಗೆ ತಲಾ ರೂ.5000 ಪುರಸ್ಕಾರ ನೀಡುವುದರ ಮೂಲಕ ಸಂಘದ ಕಾರ್ಯಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ನಿರ್ದೇಶಕರಾದ ಸಿ.ಎನ್. ಹೆಗಡೆ ಹೂಡ್ಲಮನೆ, ಕೆ.ಎಮ್. ಹೆಗಡೆ ಹೀಪ್ನಳ್ಳಿ, ಎಸ್.ವಿ. ಭಟ್ಟ ಸಾಲ್ಕಣಿ, ಗಣಪತಿ ಶೇಷಗಿರಿ ರಾಯ್ಸದ್ ಕಲ್ಸಳ್ಳಿ, ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಸು. ಭಟ್ಟ ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳ ಪಾಲಕರುಗಳು ಉಪಸ್ಥಿತರಿದ್ದರು.