ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಸಸ್ಯ ಲೋಕದಲ್ಲಿ ಜೂ.6 ರಂದು ಬೆಳಿಗ್ಗೆ 11 ಘಂಟೆಗೆ ಪೂಜ್ಯ ಸ್ವರ್ಣವಲ್ಲೀ ಶ್ರೀಗಳು ಮತ್ತು ಭಕ್ತರು, ವಿದ್ಯಾರ್ಥಿಗಳು ಗಿಡ ನೆಟ್ಟು ಬೀಜ ಬಿತ್ತನೆ ಮಾಡಿದರು. 20 ವರ್ಷಗಳ ಸಸ್ಯ ಲೋಕದ ವಿಕಾಸದ ಅವಲೋಕನ ಮಾಡಿದರು.
ಶಾಸಕ ಶಾಂತಾರಾಮ್ ಸಿದ್ದಿ, ಸಸ್ಯ ಲೋಕದ ಗೌರವ ಸಂಚಾಲಕ ಅನಂತರ ಹೆಗಡೆ ಅಶೀಸರ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ, ಸೋಂದಾ ಜಾಗೃತ ವೇದಿಕಯ ಆರ್.ಎನ್. ಹೆಗಡೆ, ಮುಂಡಿಗೆಕೆರೆ ಪಕ್ಷಿಧಾಮದ ರತ್ನಾಕರ ವನ್ಯ ಜೀವಿ ತಜ್ಞ ಬಾಲಚಂದ್ರ ಸಾಯಿಮನೆ, ವೃಕ್ಷಲಕ್ಷದ ಗಣಪತಿ ಕೆ. ಬಿಸ್ಲಕೊಪ್ಪ, ಗ್ರಾಮ ಪಂಚಾಯತದ ಅಧ್ಯಕ್ಷರು, ಸದಸ್ಯರು, ಎನ್.ಎಸ್.ಎಸ್. ವಿದ್ಯಾರ್ಥಿಗಳು, ಶಾಲಾ ಮಕ್ಕಳು ಸಸ್ಯ ಲೋಕದಲ್ಲಿ ಬೀಜ ಬಿತ್ತಿ ಸಂತಸಪಟ್ಟರು.
ಶಿರಸಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಅಜ್ಜಯ್ಯ ಹಾಗೂ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡು ವನೀಕರಣಕ್ಕೆ ಸಹಕಾರ ನೀಡಿದರು. ಸಸ್ಯ ಲೋಕದ ಮಹಾಬಲೇಶ್ವರ ಗುಮ್ಮಾನಿ ಸ್ವಾಗತಿಸಿದರು. ಪ್ರಾಧ್ಯಾಪಕ ವಿನಾಯಕ ಭಟ್ ವಂದಿಸಿದರು.