ಶಿರಸಿ: ತಾರಾನಾ ಹಾಗೂ ಸಂಚಲನ (ಬದುಕಿಗೊಂದು ಭರವಸೆ )ಸಂಘಟಿಸಿದ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಸಂಗೀತ ವಿದುಷಿ ಶ್ರೀಮತಿ ರುಚಿರಾ ಕೇದಾರ್ ಅವರ ಶಿಷ್ಯೆ ಕುಮಾರಿ ನೈದಿಲೆ ಅವರ ಗಾಯನ ಕಾರ್ಯಕ್ರಮವು ಶಿರಸಿಯ ನಯನ ಸಭಾಂಗಣದಲ್ಲಿ ನಡೆಯಿತು.
ಪೂರಿಯ ಧನಶ್ರೀ ರಾಗದೊಂದಿಗೆ ಆರಂಭವಾದ ಗಾಯನದ ನಂತರದಲ್ಲಿ ಮರಾಠಿ, ಹಿಂದಿ, ಹಾಡುಗಳ ಜೊತೆ ಕನ್ನಡ ಭಕ್ತಿ ಗೀತೆ, ಭಾವ ಗೀತೆಗಳನ್ನು ಹಾಡಿದರು. ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ್, ಹಾರ್ಮೋನಿಯಂದಲ್ಲಿ ಭರತ ಹೆಗಡೆ ಹೆಬ್ಬಲಸು ಸಹಕರಿಸಿದರು.ಗ್ವಾಲಿಯರ್ ಘರಾನದಲ್ಲಿ ಮೂಡಿ ಬಂದ ನೈದಿಲೆ ಗಾನ ಹೊಸತನದ ಮುದ ನೀಡಿತು. ಕಾರ್ಯಕ್ರಮವನ್ನು ತಾರಾ ಹೆಗಡೆ ನಿರ್ವಹಿಸಿದರು. ವಿದ್ಯಾ ಭಟ್ ವಂದಿಸಿದರು.