• Slide
    Slide
    Slide
    previous arrow
    next arrow
  • ನಸುಕಿನ ಜಾವ ಬೆಂಕಿ ದುರಂತ: ನಾಲ್ಕು ಅಂಗಡಿಗಳು ಬೆಂಕಿಗಾಹುತಿ

    300x250 AD

    ಹೊನ್ನಾವರ: ಹೈವೆ ಸರ್ಕಲ್ ಬಳಿ ಸೋಮವಾರ ನಸುಕಿನ ಜಾವ ಅಗ್ನಿ ದುರಂತದಿಂದ ನಾಲ್ಕು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

    ಗಣಪತಿ ಸೋಮಯ್ಯ ನಾಯ್ಕ ಎಂಬವರ ಹೂವಿನ ಅಂಗಡಿ, ಗೋವಿಂದ ಶೆಟ್ಟಿಯವರ ತರಕಾರಿ ಅಂಗಡಿ ಹಾಗೂ ಮಹೇಶ ನಾಗಪ್ಪ ನಾಯ್ಕ ಅವರ ಹಣ್ಣಿನ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು, ಇನ್ನೊಂದು ಅಂಗಡಿಗೂ ಬೆಂಕಿ ತಗಲಿದ್ದು, ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ.

    ಬೆಳಗ್ಗಿನ ಜಾವ ಅಂಗಡಿ ಮುಚ್ಚಿದ್ದರಿಂದ ಸ್ಥಳದಲ್ಲಿ ಯಾರು ಇರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಅಕ್ಕಪಕ್ಕ ಬೆಂಕಿ ಹರಡಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    300x250 AD

    ಪಟ್ಟಣ ಪಂಚಾಯತ್ ಅಧ್ಯಕ್ಷ ಶಿವರಾಜ ಮೇಸ್ತ, ತಹಶೀಲ್ದಾರ್ ನಾಗರಾಜ ನಾಯ್ಕ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top