ಸಿದ್ದಾಪುರ: ಮೂಲ ಭಾರತೀಯತೆಯಲ್ಲಿ ಪರಿಸರ ಪೂರಕ ಬದುಕು ಹಾಸುಹೊಕ್ಕಾಗಿದ್ದು ಇದರ ಪಾಲನೆಯಾದಲ್ಲಿ ತಾನಾಗಿಯೇ ಪರಿಸರ ಸಂರಕ್ಷಣೆ ಹಾಗೂ ಪರಿಸರ ಪಾಲನೆ ಆಗಲಿದೆ ಎಂದು ಶ್ರೀ ಮಹಾಗಣಪತಿ ಪ್ರೌಢಶಾಲೆ ಕಿಬ್ಬಳ್ಳಿಯ ಮುಖ್ಯಶಿಕ್ಷರಾದ ಜಿ.ವಿ. ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು.
ಅವರು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆ ‘ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ಗುರುಕುಲ ಶಿಕ್ಷಣ ವ್ಯವಸ್ಥೆಯಲ್ಲೆ ವ್ಯಕ್ತಿಗೆ ಪರಿಸರದ ಕುರಿತ ಜವಾಬ್ದಾರಿ ಹಾಗೂ ಪಾಲನಾ ಕ್ರಮ ಅಂದು ದೊರಕುತ್ತಿತ್ತು. ಈಗಿನ ವೇಗಯುತ ಜೀವನ ಅನೇಕ ಪಾರಿಸರಿಕ ವೈರುದ್ಯತೆಗೆ ಕಾರಣವಾಗುತ್ತಿದೆ ಎಂದರು.
ಶಾಲೆಯ ಇಕೋ ಕ್ಲಬ್ ಸಂಚಾಲಕಿ ಸಹ ಶಿಕ್ಷಕಿ ಶ್ರೀಮತಿ ಅನಿತಾ ಸಿರ್ಸಿಕರ್ ಅವರು ಪರಿಸರ ದಿನಾಚರಣೆ ಹಿನ್ನಲೆ ವಿವರಿಸುತ್ತ ಭಾರತೀಯ ಜೀವನ ಕ್ರಮ ಹೇಗೆ ಪರಿಸರಕ್ಕೆ ಪೂರಕವಿತ್ತು ಎಂಬುದನ್ನು ನಿದರ್ಶನ ಸಮೇತ ವಿವರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪರಿಸರ ಗೀತೆ ಹಾಗೂ ಪರಿಸರ ಸಂಬಂಧಿ ಚಿತ್ರಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕು.ರೋಹಿತ್ ಹೆಗಡೆ ಸ್ವಾಗತಿಸಿದರೆ. ಕುಮಾರಿ ಚೈತ್ರಾ ಗೌಡ ವಂದಿಸಿದರು. ಕುಮಾರಿ ಮೈತ್ರಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದಳು. ಶಾಲಾ ಶಿಕ್ಷಕ ವೃಂದ ಬೋಧಕೇತರ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.