• first
  second
  third
  previous arrow
  next arrow
 • ಬಿಜೆಪಿ ಒಬಿಸಿ ಮೋರ್ಚಾ ಹಾಗೂ ವಿವಿಧ ಮೋರ್ಚಾಗಳ ಸಹಕಾರದಲ್ಲಿ ವಿಶ್ವ ಪರಿಸರ ದಿನಾಚರಣೆ

  300x250 AD

  ಶಿರಸಿ; ಬಿಜೆಪಿ ಒಬಿಸಿ ಮೋರ್ಚಾ ಶಿರಸಿ ಗ್ರಾಮೀಣ ಘಟಕ ಹಾಗೂ ನಗರ ಘಟಕ ಮತ್ತು ವಿವಿಧ ಮೋರ್ಚಾಗಳ ಸಹಕಾರದೊಂದಿಗೆ,”ಕಾಡು ಬೆಳಿಸಿ-ನಾಡು ಉಳಿಸಿ” ಎಂಬ ಧ್ಯೇಯದೊಂದಿಗೆ ಕೆಳಗಿನ ಎಸಳೆ ಗ್ರಾಮದ ಶ್ರೀ ಮಾರಿಕಾಂಬಾ ವನದಲ್ಲಿ ಸಸಿ ನೆಡುವದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

  ನಂತರ, ಪ್ರಧಾನಿಗಳಾದ ನರೇಂದ್ರ ಮೋದಿಜಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯು ಕೇಂದ್ರದಲ್ಲಿ 8 ವರ್ಷಗಳ ಅಧಿಕಾರಾವಧಿಯಲ್ಲಿ “ಸೇವೆ”, “ಸುಶಾಸನ” ಮತ್ತು “ಬಡವರ ಕಲ್ಯಾಣ” ಇದರ ಅಭಿಯಾನದಡಿಯಲ್ಲಿ ಫಲಾನುಭವಿಗಳ ಜೊತೆಗೆ ಸಂವಾದ ಕಾರ್ಯಕ್ರಮವು ಎಸಳೆಯ ಸಭಾಭವನದಲ್ಲಿ ಜರುಗಿತು.

  ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಬಿಜೆಪಿ ಜಿಲ್ಲಾ ಪ್ರಧಾನ್ ಕಾರ್ಯದರ್ಶಿಗಳಾದ ಚಂದ್ರು ಎಸಳೆ ನಡೆಸಿಕೊಟ್ಟರು. ಫಲಾನುಭವಿಗಳ ಜೊತೆಗಿನ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶ್ ನಾಯಕ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೊಡ್ನಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಪಾದ ಹೆಗಡೆ ವಹಿಸಿದ್ದರು.

  300x250 AD

  ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಉಷಾ ಹೆಬ್ಬಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಯ್ಕ್, ಮಹಿಳಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ರೇಖಾ ಹೆಗಡೆ, ಶಿರಸಿ ಗ್ರಾಮೀಣ ಮಂಡಲದ ಪ್ರಧಾನ್ ಕಾರ್ಯದರ್ಶಿಯಾದ ರಮೇಶ್ ನಾಯ್ಕ್,ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಾಲತೇಶ್ ಹಾದಿಮನಿ, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷರಾದ ಸತೀಶ್ ನಾಯ್ಕ್ ಔಢಾಳ, ಸುಧೀರ್ ಕಂಚುಗಾರ್ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಪಕ್ಷದ ವಿವಿಧ ಸ್ಥರದ ಮುಖಂಡರು ಮತ್ತು ಪಕ್ಷದ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.

  ಕಾರ್ಯಕ್ರಮದ ಸ್ವಾಗತವನ್ನು ಮಾಲತೇಶ್ ಹಾದಿಮನಿ ನಡೆಸಿಕೊಟ್ಟರು. ವಂದನಾರ್ಪಣೆಯನ್ನು ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸಂಜು ಗಾವಂಕರ್ ನಡೆಸಿಕೊಟ್ಟರು.ಕಾರ್ಯಕ್ರಮದ ನಿರ್ವಹಣೆಯನ್ನು ಸತೀಶ್ ನಾಯ್ಕ್, ಔಢಾಳ ನಿರ್ವಸಿದರು.

  Share This
  300x250 AD
  300x250 AD
  300x250 AD
  Back to top