ಶಿರಸಿ: ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಆಯುಷ್ಮಾನ್ ಭವ ಸಂಘಟನೆಯಿಂದ ಮೂರು ಪ್ರತ್ಯೇಕ ಸ್ಥಳಗಳಲ್ಲಿ ನವಗ್ರಹ ವನ ನಿರ್ಮಾಣ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಯಲ್ಲಾಪುರ ತಾಲೂಕು ಸರಳೆಗುಡ್ಡೆಯ ದತ್ತಾತ್ರೆಯ ಭಟ್ಟರ ಮನೆಯ ಪರಿಸರದಲ್ಲಿ ಭೂಮಿಪೂಜೆ,ವೃಕ್ಷಪೂಜೆ ಮಾಡಿ ನವಗ್ರಹವೃಕ್ಷಗಳನ್ನು ನೆಡಲಾಯಿತು.
ಅದೇ ರೀತಿ ಶಿರಸಿ ತಾಲೂಕು ಸದಾಶಿವಳ್ಳಿಯ ಶ್ರೀ ಸದಾಶಿವ ದೇವರ ಆವಾರದಲ್ಲಿ ಶ್ರಮದಾನ,ವೃಕ್ಷಪೂಜೆ ಮತ್ತು ವನ ನಿರ್ಮಾಣ ಕಾರ್ಯ ನಡೆಯಿತು.
ಸಾಯಂಕಾಲದಲ್ಲಿ ಶಿರಸಿ ತಾಲೂಕು ಧೋರಣಗಿರಿ ಮಠದ ಜನಾರ್ದನ ಭಟ್ಟರ ಮನೆಯ ಪರಿಸರದಲ್ಲೂ ಭೂಮಿಪೂಜೆ ನೆರವೇರಿಸಿ ನವಗ್ರಹ ವೃಕ್ಷಾರೋಪಣ ನೆರವೇರಿಸಲಾಯಿತು.
ಆಯುಷ್ಮಾನ್ ಭವ ಸಂಘಟನೆಯಿಂದ ಇವತ್ತಿನಿಂದ ಪ್ರಾರಂಭವಾದ ಈ ಕಾರ್ಯ ಇನ್ನು ನಾಲ್ಕು ತಿಂಗಳು ನಿರಂತರ ನಡೆಯಲಿದ್ದು, ರಾಜ್ಯಾದ್ಯಂತ 75 ಸಾವಿರ ಯಜ್ಞವೃಕ್ಷಗಳನ್ನು ನೆಡುವ ಸಂಕಲ್ಪಹೊಂದಿದ್ದು,ಇದೊಂದು ಅಭಿಯಾನ ರೂಪದಲ್ಲಿ ನಡೆಯಲಿದೆ ಎಂದು ಸಂಚಾಲಕ ಮಂಜುನಾಥ ಭಟ್ಟ ಭಟ್ರಕೇರಿ ತಿಳಿಸಿದರು.