• Slide
    Slide
    Slide
    previous arrow
    next arrow
  • ಮಾನವೀಯತೆ ದೃಷ್ಟಿಯಿಂದ ಯುವಕರ ವಿಭಿನ್ನ ಪ್ರಯತ್ನ:’ಭವತಿ ಭಿಕ್ಷಾಂದೇಹಿ ಅಭಿಯಾನ’

    300x250 AD

    ಮುಂಡಗೋಡ: ತಾಲೂಕಿನ ಕಡು ಬಡವರು ಮೂರು ಜನರು ಅನಾರೋಗ್ಯದಿಂದ ಬಳಲುತ್ತಿದ್ದನ್ನು ಕಂಡ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಶ್ರೀ ರೇಣುಕಾ ಮೆಮೋರೆಬಲ್ ಟ್ರಸ್ಟ್ ಮುಖ್ಯಸ್ಥ ವಿಶ್ವನಾಥ ಭಜಂತ್ರಿ ಮಾರುವೇಷ ಧರಿಸಿ ಯುವಕರ ತಂಡದೊಂದಿಗೆ ಮಾನವಿಯತೆಯ ಸಹಾಯದೊಂದಿಗೆ ‘ಭವತಿ ಬಿಕ್ಷಾಂದೇಹಿ ಅಭಿಯಾನ’ವನ್ನು ಆರಂಭಿಸಲಾಗಿದೆ.

    ತಾಲೂಕಿನ ಅರಶಿಣಗೇರಿ ಗ್ರಾಮದ ಪ್ರಜ್ವಲ್ ಕದಂ ಎಂಬುವರು ಗುಪ್ತಾಂಗ ಕ್ಯಾನ್ಸರ್, ಕರವಳ್ಳಿ ಗ್ರಾಮದ ಚಿದಾನಂದ ಹರಕುಣೆ ಎಂಬುವರು ಎರಡು ಕಿಡ್ನಿ ವೈಪಲ್ಯದಿಂದ ಹಾಗೂ ರಘು ಚಲವಾದಿ ಎಂಬುವವರು ಬ್ಲಡ್ ಕ್ಯಾನ್ಸರನಿಂದ ಬಳಲುತ್ತಿದ್ದು. ಈ ಮೂವರ ಸಹಾಯಕ್ಕಾಗಿ ಕಷ್ಟದ ಸಂಕಷ್ಟದಲ್ಲಿದ್ದ ಕಾರಣ ಮಾನವೀಯತೆಯ ದೃಷ್ಟಿಯಿಂದ ಭವತಿ ಭಿಕ್ಷಾಂದೇಹಿ ಅಭಿಯಾನದ ಮುಖಾಂತರ ನೊಂದ ಜೀವಗಳಿಗೆ ಸಹಾಯವನ್ನು ಮಾಡುವ ಸ್ಪೂರ್ತಿಯನ್ನು ಇಟ್ಟುಕೊಂಡು ಮುಂಡಗೋಡ ಯಲ್ಲಾಪೂರ ಶಿರಸಿ ಹಾಗೂ ಹುಬ್ಬಳ್ಳಿಯಲ್ಲಿ ಮಾರುವೇಷದಲ್ಲಿ ಭವತಿ ಭಿಕ್ಷಾಂದೇಹಿ ಅಭಿಯಾನವನ್ನು ಮಾಡುತ್ತಿದ್ದೇವೆ.

    ಶುಕ್ರವಾರ ಶಿರಸಿ, ಮಳಗಿ, ಪಾಳಾ, ಕಾತೂರ ಭಾಗಗಳಲ್ಲಿ ತೆರಳಿದ್ದೆವು ಶನಿವಾರ, ರವಿವಾರ ಹಾಗೂ ಸೋಮವಾರವು ಬಡ ಮಕ್ಕಳಿಗಾಗಿ ಅವರ ಅನಾರೋಗ್ಯದ ಕಾರಣ ಅವರ ಒಳಿತಿಗಾಗಿ ಕೈಲಾದಷ್ಟು ಸಹಾಯ ಮಾಡುವ ಉದ್ದೇಶದಿಂದ ನಾನು ಮಾರುವೇಷದಲ್ಲಿ ನನ್ನೊಂದಿಗೆ ಸುಮಾರು 10ಕ್ಕೂ ಹೆಚ್ಚು ಯುವಕರೊಂದಿಗೆ ತೆರಳಿ ಅಭಿಯಾನದ ಮೂಲಕ ಸಹಾಯ ಮಾಡುತ್ತಿದ್ದೇನೆ ಬಡವರಿಗಾಗಿ ಕೈಲಾದಷ್ಟು ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ವಿಶ್ವನಾಥ ಭಜಂತ್ರಿ ಮನವಿ ಮಾಡಿಕೊಂಡಿದ್ದಾರೆ.

    300x250 AD


    ಈ ಅಭಿಯಾನದಲ್ಲಿ ಚಿದಾನಂದ ಬಡಿಗೇರ್ ಅಣ್ಣಪ್ಪ ಮತ್ತಳ್ಳಿ, ಶಿವು ಲಮಾಣಿ, ಮಂಜು ಹಿರೇಮಠ, ಕೈಲಾಶ್ ಗಜಕೋಷ್, ಅಂಬರೀಶ್ ಭಜಂತ್ರಿ, ಶರತ್ ಕಡಗೊಡ, ಶಿರಸಿ, ಮಳಗಿ, ಕಾತೂರ, ಪಾಳಾ ಮೂಲದ ಅನೇಕ ಜನ ಭಾಗಿಯಾದ್ದು ಜೊತೆಗಿದ್ದು ಸಹಕರಿಸಿದ್ದಾರೆ ಅವರೆಲ್ಲರಿಗೂ ನಾನೂ ಚಿರಋಣಿಯಾಗಿದ್ದೇವೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top