ಸಿದ್ದಾಪುರ: ತಾಲೂಕಿನ ವಾಜಗದ್ದೆ ಸಮೀಪದ ವಾಟೆಹಕ್ಲ ತಿರುವಿನಲ್ಲಿ ಸಿಮೇಂಟ್ ತುಂಬಿಕೊಂಡು ಬರುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಸಹಿತ ಮೂವರಿಗೆ ಪೆಟ್ಟು ಬಿದ್ದ ಘಟನೆ ಭಾನುವಾರ ಸಂಭವಿಸಿದೆ.
ಹದಿನಾರನೇ ಮೈಲಕಲ್ ಕಡೆಯಿಂದ ಹಾರ್ಸಿಕಟ್ಟಾ ಕಡೆಗೆ ಬರುತ್ತಿದ್ದ ಲಾರಿಯಾಗಿದೆ. ಅತಿವೇಗವಾಗಿ ಹಾಗೂ ಚಾಲಕನ ನಿರ್ಲಕ್ಷತನದಿಂದ ಈ ಘಟನೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಕುಮಾರ್ ಚನ್ನಪ್ಪ ರಾಮಾವತ್ ಅವರಿಗೆ ಹಾಗೂ ಹಮಾಲಿಗಳಾದ ಸೋಮಶೇಖರ ಕಾಳಾ ನಾಯ್ಕ ಬಾಲಿಕೊಪ್ಪ, ನೀಲಕಂಠ ನಾರಾಯಣ ಅಂಬಿಗ ಸಿದ್ದಾಪುರ, ಶೇಖರ ಶಿವಾ ಅಂಬಿಗ ಸಿದ್ದಾಪುರ ಇವರಿಗೆ ಸಣ್ಣ ಪುಟ್ಟ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕನ ನಿರ್ಲಕ್ಷ್ಯ: ಸಿಮೆಂಟ್ ತುಂಬಿದ್ದ ಲಾರಿ ಪಲ್ಟಿ
