ಕಾರವಾರ: “Only One Earth” (ಇರುವುದೊಂದೆ ಭೂಮಿ) ಎಂಬ ಧ್ಯೆಯವಾಕ್ಯದೊಂದಿಗೆ ಜಿಲ್ಲಾ ಪೊಲೀಸ್ ಮೈದಾನದ ಆವರಣದಲ್ಲಿ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಉತ್ತರಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಅರಣ್ಯ ಇಲಾಖೆಯವರು ನೀಡಿದ, ವಿವಿಧ ತಳಿಯ ಗಿಡಗಳನ್ನು ಮೈದಾನದ ಆವರಣದಲ್ಲಿ ಮತ್ತು ಪೊಲೀಸ್ ಠಾಣೆಗಳ ಹಾಗೂ ವಸತಿಗೃಹಗಳ ಮುಂಭಾಗದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು .