ಗೋಕರ್ಣ:ಸಮುದ್ರದ ಅಲೆಗೆ ಪ್ರವಾಸಿಗನೊಬ್ಬ ಕೊಚ್ಚಿ ಹೋಗಿ ನಾಪತ್ತೆಯಾದ ಘಟನೆ ಗೋಕರ್ಣ ಹಾಪ್ ಮೂನ್ ಬೀಚ್‌ನಲ್ಲಿ ನಡೆದಿದೆ.ಬೆಂಗಳೂರಿನ ಇಂದಿರಾ ನಗರ ನಿವಾಸಿ ರಾಕೇಶ ಗೌಡ (21) ನೀರು ಪಾಲಾದ ವ್ಯಕ್ತಿಯಾಗಿದ್ದಾನೆ. ಈತನು ತನ್ನ ಇಬ್ಬರು ಗೆಳೆಯರೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದ ಸಮಯದಲ್ಲಿ ಸಮುದ್ರದಲ್ಲಿ ಈಜಾಡುತ್ತಿರುವಾಗ ದುರ್ಘಟನೆ ಸಂಭವಿಸಿದೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.ಸ್ಥಳಕ್ಕೆ ಪಿ.ಎಸ್.ಐ. ಹಾಗು ಸಿಬ್ಬಂದಿಗಳು ಪರಿಶೋಧನೆ ನಡೆಸಿದ್ದರು.