ಶಿರಸಿ; ಕೆಲವು ದಿನಗಳ ಹಿಂದೆ ಅಪಹರಣ ಸಂಬಂಧಿತ ದೂರು ದಾಖಲಾದ ಯುವತಿ ವಿವಾಹಿತೆಯಾಗಿ ಪ್ರತ್ಯಕ್ಷವಾಗಿದ್ದಾಳೆ. ತಾಲೂಕಿನ ಹುಲೇಕಲ್ ಕಾಮಾಕ್ಷಿ ಹಾಗೂ ಮಂಜುನಾಥ ವಿವಾಹವಾಗಿದ್ದು,ಕುಮಟಾ ಪೊಲೀಸ್ ಠಾಣೆಗೆ ಮದುವೆಯಾದ ಫೊಟೊ ಸಮೇತ ಹಾಜರಾಗಿದ್ದಾರೆ.
ಈಕೆಯು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಶಿರಸಿಯ ಎಲ್‌ಐಸಿ ಏಜೆಂಟ್ ಸುಬ್ರಹ್ಮಣ್ಯ ಭಂಡಾರಿ ಅವರೊಂದಿಗೆ ತಾನು ಸ್ವಇಚ್ಛೆಯಿಂದಲೇ ತೆರಳಿದ್ದು, ಇಬ್ಬರೂ ಧಾರವಾಡ ಜಿಲ್ಲೆಯ ದುರ್ಗಾದೇವಿ ದೇವಸ್ಥಾನದಲ್ಲಿ ವಿವಾಹವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾಳೆ. ಈ ಮೂಲಕ ಅಪಹರಣ ಪ್ರಕರಣ ತೆರೆಕಂಡಿದೆ.
ಕುಮಟಾ ಸಂಬಂಧಿಕರ ಮನೆಯಲ್ಲಿದ್ದ ಕಾಮಾಕ್ಷಿಯವರನ್ನು ಮಂಜುನಾಥ ಕಿಡ್ನಾಪ್ ಮಾಡಿದ್ದಾರೆಂದು ಕುಮಟಾ ಪೊಲೀಸ್ ಠಾಣೆಯಲ್ಲಿ ಆಕೆಯ ಸಂಬಂಧಿಕರು ಕೆಲ ದಿನಗಳ ಹಿಂದೆ ದೂರು ನೀಡಿದ್ದರು.